ಕರ್ನಾಟಕ

karnataka

ETV Bharat / state

ಗಣೇಶೋತ್ಸವ, ಮೋಹರಂ ಹಬ್ಬದ ಹಿನ್ನೆಲೆ.. ಸಂಭ್ರಮಾಚರಣೆಗೆ ನಡೆಯಿತು ಜಿಲ್ಲಾ ಮಟ್ಟದ ಶಾಂತಿ ಸಭೆ! - District level peace meeting

ಗಣೇಶೋತ್ಸವ, ಮೋಹರಂ ಹಬ್ಬದ ಹಿನ್ನೆಲೆಯಲ್ಲಿ ನಗರದ ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಶಾಂತಿ ಸಭೆ ನಡೆದಿದ್ದು, ಪೊಲೀಸ್ ವರಿಷ್ಠಾಧಿಕಾರಿ ಕೆ ಎಂ ಶಾಂತರಾಜ್ ಮಾತನಾಡಿ, ಯಾವುದೇ ಅವಘಡಕ್ಕೆ ಎಡೆಮಾಡಿಕೊಡದಂತೆ ಶಾಂತಿಯುತ ಸಂಭ್ರಮಾಚರಣೆಗೆ ಕರೆ ನೀಡಿದ್ದಾರೆ.

ಜಿಲ್ಲಾ ಮಟ್ಟದ ಶಾಂತಿ ಸಭೆ ..!

By

Published : Aug 30, 2019, 12:01 PM IST

ಶಿವಮೊಗ್ಗ: ಗಣೇಶೋತ್ಸವ, ಮೋಹರಂ ಹಬ್ಬದ ಹಿನ್ನೆಲೆಯಲ್ಲಿ ನಗರದ ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಶಾಂತಿ ಸಭೆ ನಡೆದಿದ್ದು, ಶಾಂತಿಯುತ ಸಂಭ್ರಮಾಚರಣೆಗೆ ಕರೆ ನೀಡಿದ್ದಾರೆ.

ಗಣೇಶೋತ್ಸವ ಹಾಗೂ ಮೋಹರಂ ಹಬ್ಬದ ಹಿನ್ನೆಲೆ.. ಜಿಲ್ಲಾ ಮಟ್ಟದ ಶಾಂತಿ ಸಭೆ!

ಶಾಂತಿ ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ ಎಂ ಶಾಂತರಾಜ್ ಮಾತನಾಡಿ, ನಮ್ಮ ಸಂಭ್ರಮ ಇನ್ನೊಬ್ಬರಿಗೆ ತೊಂದರೆ ಆಗದಿರಲಿ. ಹಾಗಾಗಿ ಶಾಂತ ರೀತಿಯಲ್ಲಿ ಎರಡು ಹಬ್ಬಗಳನ್ನು ಆಚರಿಸಬೇಕು. ಇದಕ್ಕೆ ಸಾರ್ವಜನಿಕರ ಸಹಕಾರ ತುಂಬಾ ಅಗತ್ಯ ಎಂದರು.

ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ, ಸಾರ್ವಜನಿಕರ ಹಿತ ದೃಷ್ಟಿಯಿಂದ ಡಿಜೆ ಸೌಂಡ್ ಬಳಸದಂತೆ ತಿಳಿಸಿದರು. ಈ ಸಭೆಯಲ್ಲಿ ಎರಡು ಧರ್ಮದ ಮುಖಂಡರು ಹಾಗೂ ಸಾರ್ವಜನಿಕರು ಜೊತೆಗೆ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ABOUT THE AUTHOR

...view details