ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.
ಧಾರಾವಾಹಿಗಳಿಂದಾಗಿ ಪೋಷಕರು ಮಕ್ಕಳಿಗೆ ಟೈಮ್ ಕೊಡ್ತಿಲ್ಲ: ಸುಮಾ ಮೂರ್ತಿ
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.
ಸಂವಾದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಸುಮಾ ಮೂರ್ತಿ ಇತ್ತೀಚಿನ ದಿನಗಳಲ್ಲಿ ಟಿವಿ ಮಾಧ್ಯಮ , ಧಾರವಾಹಿಗಳಿಂದಾಗಿ ಪೋಷಕರು ಮಕ್ಕಳಿಗೆ ಸಮಯ ಮಿಸಲಿಡುತ್ತಿಲ್ಲ. ಮಕ್ಕಳಿಗಾಗಿ ಸಮಯವನ್ನು ಮಿಸಲಿಡಿ ಹಾಗೂ ಸಂಸ್ಕಾರ ಕಲಿಸಿ. ಇಂದಿನ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಡಿಗ್ರಿಗಳು ಸಿಗುತ್ತಿವೆಯೇ ಹೊರತು ಸಂಸ್ಕಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಮಕ್ಕಳಿಗೆ ಶಾಲಾ ,ಕಾಲೇಜುಗಳಲ್ಲಿ ಸಂಸ್ಕಾರ ಸಿಗುತ್ತದೇಯೋ ಇಲ್ಲವೋ ಗೊತ್ತಿಲ್ಲ, ಆದರೆ ಮನೆಯಲ್ಲಿ ತಪ್ಪದೇ ಸಂಸ್ಕಾರ ಕಲಿಸಿ ಎಂದರು.
ಕಾರ್ಯಕ್ರಮದಲ್ಲಿ ರಾಜಶೇಖರ ಪಾಟೀಲ್ ನೆಗವಾಡಿ, ಶೀಲಾ ಸುರೇಶ್ , ಬಿ.ಟಿ ಅಂಬಿಕಾ, ಕಿರಣ್ ದೇಸಾಯಿ, ಸರ್ವಾಧ್ಯಕ್ಷರಾದ ವಿಜಯಾ ಶ್ರೀಧರ್, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಿ.ಬಿ ಶಂಕರಪ್ಪ ಇತರರು ಉಪಸ್ಥಿತರಿದ್ದರು.
TAGGED:
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ