ಕರ್ನಾಟಕ

karnataka

ETV Bharat / state

ಶಿವಮೊಗ್ಗ ಗಲಾಟೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ಮೊದಲ ಆರೋಪಿಯಾಗಬೇಕು : ಸುಂದರೇಶ್ ಆಗ್ರಹ - ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಸುದ್ದಿಗೋಷ್ಠಿ

ಸಚಿವ ಈಶ್ವರಪ್ಪ ಅವರನ್ನು ಆರೋಪಿ ನಂಬರ್ ಓನ್ ಮಾಡಬೇಕು. ಅಲ್ಲದೆ, ಅಂದು ಸೇರಿದ್ದ ಬಿಜೆಪಿಯ ಎಲ್ಲಾ ನಾಯಕರುಗಳ ವಿರುದ್ಧ ಪ್ರಕರಣ ದಾಖಲಾಗಬೇಕು. ಇಲ್ಲವಾದಲ್ಲಿ ಜಿಲ್ಲಾ ಕಾಂಗ್ರೆಸ್ ಹಾಗೂ ನಮ್ಮ ರಾಜ್ಯ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ ಸುಂದರೇಶ್ ಎಚ್ಚರಿಕೆ ರವಾನಿಸಿದ್ದಾರೆ..

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಆಗ್ರಹ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಆಗ್ರಹ

By

Published : Feb 28, 2022, 3:47 PM IST

ಶಿವಮೊಗ್ಗ: ಹರ್ಷನ ಶವದ ಮೆರವಣಿಗೆ ದಿನ ನಡೆದ ಗಲಾಟೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ಸಚಿವ ಈಶ್ವರಪ್ಪ ಅವರನ್ನು ಆರೋಪಿ ನಂಬರ್​ 1 ಎಂದು ಕೇಸ್​ ಹಾಕುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ​ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಆಗ್ರಹಿಸಿದ್ದಾರೆ.

ಸಚಿವ ಕೆ ಎಸ್‌ ಈಶ್ವರಪ್ಪ ವಿರುದ್ಧ ಕೇಸ್ ಹಾಕುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಆಗ್ರಹಿಸಿರುವುದು..

ಇಂದು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ್ಷನ ಶವದ ಮೆರವಣಿಗೆಯಲ್ಲಿ ಇದ್ದವರು ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಹಾಗೂ ಪಾಲಿಕೆ ಸದಸ್ಯ ಚನ್ನಬಸಪ್ಪ. ಇವರುಗಳು ಇದ್ದರೂ ಗಲಾಟೆ ನಡೆದಿದೆ.

ಇದರಿಂದ ಸಚಿವ ಈಶ್ವರಪ್ಪ ಅವರನ್ನು ಆರೋಪಿ ನಂಬರ್ 1 ಮಾಡಬೇಕು. ಅಲ್ಲದೆ, ಅಂದು ಸೇರಿದ್ದ ಬಿಜೆಪಿಯ ಎಲ್ಲಾ ನಾಯಕರುಗಳ ವಿರುದ್ಧ ಪ್ರಕರಣ ದಾಖಲಾಗಬೇಕು. ಇಲ್ಲವಾದಲ್ಲಿ ಜಿಲ್ಲಾ ಕಾಂಗ್ರೆಸ್ ಹಾಗೂ ನಮ್ಮ ರಾಜ್ಯ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು‌.

ಹರ್ಷನ ಕೊಲೆ ವೈಯಕ್ತಿಕ ವಿಚಾರವಾಗಿ ನಡೆದಿದೆ. ‌ಹರ್ಷ ಬದುಕಿದ್ದಾಗ, ಬಿಜೆಪಿಯವರು ಕನಿಷ್ಠ ಒಂದು ಸಣ್ಣ ಸಹಾಯವನ್ನು ಮಾಡಿಲ್ಲ. ಆತ ಮಹಾನಗರ ಪಾಲಿಕೆಯ ವತಿಯಿಂದ ಕೊರೊನಾ ಸಂದರ್ಭದಲ್ಲಿ ವಾರ್ಡ್ ಸೂಪರ್​ ವೈಸರ್ ಆಗಿ ಕೆಲಸ ನೀಡಿರಲಿಲ್ಲ. ಹರ್ಷ ಒಮ್ಮೆ ಗಲಾಟೆ ಮಾಡಿ ಜೈಲಿಗೆ ಹೋಗಿ ಬಂದಿರುತ್ತಾನೆ.

ನಂತರ ಅಲ್ಲಿ ಗಲಾಟೆ ನಡೆದಿರುತ್ತದೆ. ಆಗ ಹರ್ಷನ ತಾಯಿ ಈತ ಯಾವುದೇ ಸಂಘಟನೆಯಲ್ಲಿ ಇಲ್ಲ ಎಂದು ಹೇಳಿ ಪೊಲೀಸರಿಗೆ ಬರೆದು ಕೊಟ್ಟಿರುತ್ತಾರೆ. ಈಗ ಬಿಜೆಪಿಯವರು ತಮ್ಮ ಲಾಭಕ್ಕಾಗಿ ಹರ್ಷ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾನೆ ಎಂದು ಉತ್ತರಪ್ರದೇಶದ ಚುನಾವಣೆಯ ದೃಷ್ಟಿಯಿಂದ ಹೀಗೆ ಮಾಡುತ್ತಿದ್ದಾರೆ. ಉತ್ತರಪ್ರದೇಶದ ಚುನಾವಣೆ ಪ್ರಚಾರದಲ್ಲೂ ಪ್ರಧಾನಮಂತ್ರಿ ಮೋದಿ ಅವರು ಹರ್ಷನ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ ಎಂದು ಸುಂದರೇಶ್ ವಾಗ್ದಾಳಿ​ ನಡೆಸಿದರು.

ಇದನ್ನೂ ಓದಿ : ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ಜೊತೆಗೆ ಚರ್ಚಿಸಿ ನಿರ್ಧಾರ: ಸಿಎಂ

ಹಿಜಾಬ್ ವಿಚಾರನ್ನು ಉಡುಪಿಯ ಶಾಸಕ ರಘುಪತಿ ಭಟ್ ಹುಟ್ಟು ಹಾಕಿದರು. ಈಗ ಇದನ್ನೇ ಬಿಜೆಪಿಯವರು ತಮ್ಮ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಸುಂದರೇಶ್​ ಅವರು, ಬಿಜೆಪಿಯವರು ಯಾವುದೇ ಅಭಿವೃದ್ಧಿ ಕಾರ್ಯದ ಮೇಲೆ ಮತ ಕೇಳದೆ, ಜನರೆದುರು ಭಾವನಾತ್ಮಕವಾಗಿ ಮಾತನಾಡಿ ಮತ ಕೇಳುತ್ತಾರೆ. ಹರ್ಷನ ಶವದ ಮೆರವಣಿಗೆ ವೇಳೆ ಆದ ನಷ್ಟವನ್ನು ಸಚಿವ ಈಶ್ವರಪ್ಪನವರೇ ಭರಿಸಬೇಕೆಂದು ಸುಂದರೇಶ್ ಆಗ್ರಹಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details