ಕರ್ನಾಟಕ

karnataka

ETV Bharat / state

ಗ್ರಾಮೀಣ ಮಕ್ಕಳ ವಿದ್ಯಾರ್ಜನೆಗೆ ಇವರದ್ದು ದೊಡ್ಡ ಕೊಡುಗೆ..! - kannada newspaper, etvbharat, ಗ್ರಾಮೀಣ, ಮಕ್ಕಳು, ವಿದ್ಯಾರ್ಜನೆ, ಉಚಿತ ನೋಟ್ ಬುಕ್ ವಿತರಣೆ, ಚಂದ್ರಪ್ಪ

ಗ್ರಾಮೀಣ ಪ್ರದೇಶದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು, ಸಮಾಜದ ಆಸ್ತಿಯಾಗಿ ಸಮಾಜ ಸೇವೆ ನಡೆಸಬೇಕು ಎಂಬ ಉದ್ದೇಶದಿಂದ ಕುಂಸಿ ಮೂಲದ ಕಟ್ಟಡ ಗುತ್ತಿಗೆದಾರರಾದ ಚಂದ್ರಪ್ಪ ಎಂಬುವವರು ಸತತ 14 ವರ್ಷಗಳಿಂದ ಮೂರು ಸಾವಿರ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್‌ ಗಳನ್ನು ವಿತರಿಸುತ್ತಿದ್ದಾರೆ.

ಉಚಿತ ನೋಟ್ ಬುಕ್ ವಿತರಣೆ

By

Published : Jun 27, 2019, 1:04 PM IST

ಶಿವಮೊಗ್ಗ: ಗ್ರಾಮೀಣ ಪ್ರದೇಶದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು, ಸಮಾಜದ ಆಸ್ತಿಯಾಗಿ ಸಮಾಜ ಸೇವೆ ನಡೆಸಬೇಕು ಎಂಬ ಉದ್ದೇಶದಿಂದ ಕುಂಸಿ ಮೂಲದ ಕಟ್ಟಡ ಗುತ್ತಿಗೆದಾರರಾದ ಚಂದ್ರಪ್ಪ, ಪ್ರತಿ ವರ್ಷ ಮೂರು ಸಾವಿರ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್‌ ವಿತರಿಸುತ್ತಿದ್ದಾರೆ.

ಶಿವಮೊಗ್ಗ ತಾಲೂಕು ಕುಂಸಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ವರ್ಷ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಅಲ್ಲಿ ಕುಂಸಿ ಹೋಬಳಿಯ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಮತ್ತು ಅನುದಾನ ರಹಿತ ಸೇರಿದಂತೆ ಎಲ್ಲಾ ಶಾಲಾ- ಕಾಲೇಜುಗಳಿಗೆ ಉಚಿತ ನೋಟ್ ಬುಕ್ ವಿತರಿಸುತ್ತಿದ್ದಾರೆ.

ಗ್ರಾಮೀಣ ಮಕ್ಕಳ ವಿದ್ಯಾರ್ಜನೆಗೆ ಉಚಿತ ನೋಟ್ ಬುಕ್ ವಿತರಣೆ

ಚಂದ್ರಪ್ಪ ಶಾಲೆಯ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದಂತೆಯೇ ತಮ್ಮ ಕುಂಸಿ ಹೋಬಳಿಯ ಎಲ್ಲ ಶಾಲೆಗಳಲ್ಲಿ ಎಷ್ಟು ಮಕ್ಕಳಿದ್ದಾರೆ. ಅವರಿಗೆ ಯಾವ ರೀತಿಯ ನೋಟ್ ಬುಕ್​​​​ಗಳು ಬೇಕು, ಯಾವ ರೀತಿಯ ಇತರ ವಸ್ತುಗಳು ಬೇಕು ಅಂತ ಮೊದಲೇ ಮಾಹಿತಿ ಪಡೆದು ನಂತ್ರ ನೋಟ್ ಬುಕ್ ಗಳನ್ನು ಪ್ರಿಂಟ್ ಗೆ ಕಳುಹಿಸಿ ಕೊಡುತ್ತಾರೆ. ಸರ್ಕಾರಿ ಶಾಲೆಯಲ್ಲಿ ವಿತರಿಸುವ ಪಠ್ಯ ಪುಸ್ತಕಗಳನ್ನು ಬಿಟ್ಟು, ಪ್ರತಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳು, ಪೆನ್, ಪೆನ್ಸಿಲ್ ಜಾಮಿಟ್ರಿ ಬಾಕ್ಸ್​ಗಳನ್ನು ವಿತರಿಸುತ್ತಾರೆ. ಈ ಪುಸ್ತಕಗಳನ್ನು ಸಾಂಕೇತಿಕವಾಗಿ‌ ಕುಂಸಿಯ ಸರ್ಕಾರಿ ಶಾಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ವಿತರಿಸಲಾಗುತ್ತದೆ. ನಂತ್ರ ಪ್ರತಿ ಶಾಲೆಗೆ ಹೋಗಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಗುತ್ತದೆ.

For All Latest Updates

TAGGED:

ABOUT THE AUTHOR

...view details