ಶಿವಮೊಗ್ಗ:ಪ್ರೆಸ್ ಟ್ರಸ್ಟ್ ಹಾಗೂ ದಾನಿಗಳ ಸಹಕಾರದೊಂದಿಗೆ ಅಗತ್ಯ ದಿನಸಿ ಸಾಮಗ್ರಿಗಳ ಕಿಟ್ ಸಿದ್ಧಪಡಿಸಿ ಪತ್ರಕರ್ತರಿಗೆ ವಿತರಿಸಲಾಯಿತು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ನಿಂದ ಪತ್ರಕರ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ - District Collector KB Shivakumar
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ದಾನಿಗಳ ಸಹಕಾರದೊಂದಿಗೆ ಅಗತ್ಯ ದಿನಸಿ ಸಾಮಗ್ರಿಗಳ ಕಿಟ್ ಸಿದ್ಧಪಡಿಸಿ ಪತ್ರಕರ್ತರಿಗೆ ವಿತರಿಸಲಾಯಿತು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ನಿಂದ ಪತ್ರಕರ್ತರಿಗೆ ಆಹಾರದ ಕಿಟ್ ವಿತರಣೆ
ಶಿವಮೊಗ್ಗದ ಪತ್ರಿಕಾ ಭವನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸಾಂಕೇತಿಕವಾಗಿ ಕಿಟ್ಗಳನ್ನ ಪತ್ರಕರ್ತರಿಗೆ ವಿತರಿಸಿದರು. ನಂತರ ಮಾತನಾಡಿದ ಅವರು, ಜಗತ್ತಿನಲ್ಲೆಡೆ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ. ಈ ರೀತಿ ಜಗತ್ತಿನೆಲ್ಲೆಡೆ ಕೊರೊನಾ ವೈರಸ್ ಹರಡುತ್ತದೆ ಎಂಬ ಕಲ್ಪನೆಯನ್ನು ಯಾರೂ ಕೂಡ ಮಾಡಿರಲಿಲ್ಲ ಎಂದರು.
ಆಹಾರದ ಕಿಟ್ನಲ್ಲಿ 10 ಕೆಜಿ ಅಕ್ಕಿ, 2 ಲೀಟರ್ ಅಡುಗೆ ಎಣ್ಣೆ, ಅವಲಕ್ಕಿ, ರವೆ, ಈರುಳ್ಳಿ, ಟೀ ಪುಡಿ, ಕಾಫಿ ಪುಡಿ, ಪುಳಿಯೊಗರೆ ಪುಡಿಗಳನ್ನ ನೀಡಲಾಯಿತು.