ಕರ್ನಾಟಕ

karnataka

ETV Bharat / state

ಹಳ್ಳಿಗಳಲ್ಲಿನ Network ಸಮಸ್ಯೆ ಪರಿಹಾರಕ್ಕೆ ಡಿಜಿಟಲ್ ವಿಲೇಜ್ ಯೋಜನೆ ಜಾರಿ : ಸಚಿವ ರಾಜೀವ್ ಚಂದ್ರಶೇಖರ್

ಭಾರತಾದ್ಯಂತ 6 ಲಕ್ಷ ಗ್ರಾಮಗಳನ್ನು ಡಿಜಿಟಲೀಕರಣಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ ಒಂದೆರಡು ವರ್ಷಗಳ ಒಳಗಾಗಿ 2 ಲಕ್ಷ ಗ್ರಾಮಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಶೀಘ್ರದಲ್ಲಿ ಪ್ರತಿ ಜಿಲ್ಲೆಯ ಒಂದೊಂದು ಗ್ರಾಮವನ್ನು ಡಿಜಿಟಲೀಕರಣಗೊಳಿಸಲಾಗುವುದು..

digital village scheme to overcome from network problem
ಸಚಿವ ರಾಜೀವ್ ಚಂದ್ರಶೇಖರ್ ಸುದ್ದಿಗೋಷ್ಟಿ

By

Published : Aug 17, 2021, 6:39 PM IST

ಶಿವಮೊಗ್ಗ :ಗ್ರಾಮೀಣ ಭಾಗದ ನೆಟ್​ವರ್ಕ್​ ಸಮಸ್ಯೆ ಬಗೆಹರಿಸಲು ಡಿಜಿಟಲ್ ವಿಲೇಜ್ ಯೋಜನೆ ಕಾರ್ಯಗತಗೊಳಿಸುವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ಡಿಜಿಟಲ್‌ ವಿಲೇಜ್ ಯೋಜನೆ ಕುರಿತಂತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿಕೆ..

ನಗರದಲ್ಲಿ ಮಾತನಾಡಿದ ಅವರು, ಕೊರೊನಾ ಕಾರಣದಿಂದಾಗಿ ದೊಡ್ಡ-ದೊಡ್ಡ ನಗರಗಳಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಹಳ್ಳಿಗಳಿಗೆ ಆಗಮಿಸಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ, ಕುಗ್ರಾಮಗಳ ಉದ್ಯೋಗಿಗಳು ನೆಟ್​ವರ್ಕ್​​ ಸಮಸ್ಯೆ ಎದುರಿಸುತ್ತಿದ್ದಾರೆ.

ಈ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಡಿಜಿಟಲ್ ವಿಲೇಜ್ ಕಾನ್ಸೆಪ್ಟ್​​ನಲ್ಲಿ 'ಭಾರತ್ ನೆಟ್' ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.

ಇದನ್ನೂ ಓದಿ :ಸ್ವಂತ ಉದ್ಯಮ ಆರಂಭಿಸಿ, ಮಹಿಳೆಯರಿಗೆ ಉದ್ಯೋಗ ಕೊಟ್ಟ ಕಲಬುರಗಿಯ ಎಂಬಿಎ ಪದವೀಧರ

ಭಾರತಾದ್ಯಂತ 6 ಲಕ್ಷ ಗ್ರಾಮಗಳನ್ನು ಡಿಜಿಟಲೀಕರಣಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ ಒಂದೆರಡು ವರ್ಷಗಳ ಒಳಗಾಗಿ 2 ಲಕ್ಷ ಗ್ರಾಮಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಶೀಘ್ರದಲ್ಲಿ ಪ್ರತಿ ಜಿಲ್ಲೆಯ ಒಂದೊಂದು ಗ್ರಾಮವನ್ನು ಡಿಜಿಟಲೀಕರಣಗೊಳಿಸುವುದಾಗಿ ರಾಜೀವ್ ಚಂದ್ರಶೇಖರ್ ಮಾಹಿತಿ ನೀಡಿದರು.

ಇದನ್ನೂ ಓದಿ:ಈ ರಾಜ್ಯದಲ್ಲಿ ಆನ್​ಲೈನ್​ನಲ್ಲೇ ಮದ್ಯ ಖರೀದಿಗೆ ಅವಕಾಶ.. ಇಂದಿನಿಂದ ಜಾರಿ!

ABOUT THE AUTHOR

...view details