ಶಿವಮೊಗ್ಗ: ಮನೆ ಮುಂದೆ ಹಾಗೂ ರಸ್ತೆ ಪಕ್ಕದಲ್ಲಿ ನಿಂತಿದ್ದ ವಾಹನಗಳಿಂದ ಡೀಸೆಲ್ ಕದಿಯುತ್ತಿದ್ದ ಮೂವರು ಕಳ್ಳರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಾಸ್ತಿಕಟ್ಟೆ ಬಳಿ ನಡೆದಿದೆ. ಕಳೆದ 2-3 ವರ್ಷಗಳಿಂದ ತೀರ್ಥಹಳ್ಳಿ-ಹೊಸನಗರ ಭಾಗದಲ್ಲಿ ಡೀಸೆಲ್ ಕಳ್ಳತನ ಮಾಡುತಿದ್ದ ಖದೀಮರು ಸಾರ್ವಜನಿಕರ ನಿದ್ದೆಗೆಡಿಸಿದ್ದರು. ಡೀಸೆಲ್‌ಸಮೇತ ಡಬ್ಬಗಳು, ಪೈಪ್, ಟಯರ್ಗಳು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ಡೀಸೆಲ್ ಕಳ್ಳರ ಹಿಡಿದು ಪೊಲೀಸರಿಗೊಪ್ಪಿಸಿದ ಜನರು - ಹೊಸನಗರ ಪೊಲೀಸರ
ಖದೀಮರ ತಂಡವೊಂದು ಕಳೆದ 2-3 ವರ್ಷಗಳಿಂದ ತೀರ್ಥಹಳ್ಳಿ-ಹೊಸನಗರ ಭಾಗದಲ್ಲಿ ನಿಲ್ಲಿಸಿದ್ದ ವಾಹನದಿಂದ ಡೀಸೆಲ್ ಕಳ್ಳತನ ಮಾಡುತ್ತಿತ್ತು.
ಗ್ರಾಮಸ್ಥರಿಂದಲೇ ಡೀಸೆಲ್ ಕಳ್ಳರ ಬಂಧನ
Last Updated : Dec 9, 2022, 6:11 PM IST