ಶಿವಮೊಗ್ಗ:ಡಿ.ಹೆಚ್. ಶಂಕರಮೂರ್ತಿ ಓರ್ವ ದೇಶದ್ರೋಹಿ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಡಿ.ಹೆಚ್. ಶಂಕರಮೂರ್ತಿ ಓರ್ವ ದೇಶದ್ರೋಹಿ: ಕಾಗೋಡು ತಿಮ್ಮಪ್ಪ - ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಲೆಟೆಸ್ಟ್ ನ್ಯೂಸ್
ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ವಿರುದ್ಧ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಿಡಿಕಾರಿದ್ದು, ಡಿ .ಹೆಚ್. ಶಂಕರಮೂರ್ತಿ ಓರ್ವ ದೇಶದ್ರೋಹಿ ಎಂದು ವಾಗ್ದಾಳಿ ನಡೆಸಿದ್ದಾರೆ.
Kagodu Thimmappa
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಂಕರಮೂರ್ತಿ ಎಲ್ಲರಿಗಿಂತ ದೊಡ್ಡ ದೇಶದ್ರೋಹಿ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಅನುಭವ, ಪರಿಶ್ರಮವಾಗಲಿ ಗೊತ್ತಿಲ್ಲ. ಇದ್ದ ಅಧಿಕಾರವನ್ನೆಲ್ಲ ಅನುಭವಿಸಿ ಈಗ ಅಧಿಕಾರ ಉಳಿಸಿಕೊಳ್ಳಲು ಹೀಗೆ ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ದೇಶದಲ್ಲಿ ನಾಗರಿಕ ಕಾಯ್ದೆ ಇದೆ. ಅದರಲ್ಲಿ ಒಂದು ಜಾತಿಯನ್ನು ಹೊರ ಹಾಕುತ್ತಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು. ಇದಕ್ಕೆ ಡಿ.ಹೆಚ್.ಶಂಕರಮೂರ್ತಿ ಯಾಕೆ ಉತ್ತರ ನೀಡುತ್ತಿಲ್ಲ ಎಂದು ಕಿಡಿಕಾರಿದರು.
TAGGED:
Kagodu Thimmappa latest news