ಶಿವಮೊಗ್ಗ:ಸಾಗರ ಪೇಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 7 ಬೈಕ್ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.
ಸಾಗರ ಪೊಲೀಸರ ಭರ್ಜರಿ ಕಾರ್ಯಾಚರಣೆ, 7 ಬೈಕ್, 1 ಕಾರು ವಶ.. ಇಬ್ಬರ ಬಂಧನ - ಶಿವಮೊಗ್ಗ ಕಳ್ಳರ ಬಂಧನ ಸುದ್ದಿ
ಸಾಗರ ಪೇಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 7 ಬೈಕ್ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.
ಇಂದು ಬೆಳಗ್ಗಿನ ಜಾವ ಸಾಗರದ ವರದಹಳ್ಳಿ ಸರ್ಕಲ್ ಬಳಿ ವಾಹನ ತಪಾಸಣೆ ವೇಳೆ ಅನುಮಾನ ಬರುವ ರೀತಿ ವರ್ತಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಇಬ್ಬರನ್ನು ತಾಜುದ್ಧೀನ್ (22) ಹಾಗೂ ಅರ್ಷದ್ (28) ಎಂದು ಗುರುತಿಸಲಾಗಿದೆ. ಇಬ್ಬರು ಸಾಗರ ವ್ಯಾಪ್ತಿಯಲ್ಲಿ 1 ಕಾರು, 3 ಬೈಕ್ ಕಳ್ಳತನತನ ಮಾಡಿದ್ದು, ಶಿವಮೊಗ್ಗ ವ್ಯಾಪ್ತಿಯಲ್ಲಿ 4 ಬೈಕ್ ಕಳ್ಳತನ ನಡೆಸಿದ್ದರು. ಒಟ್ಟು 8 ಪ್ರಕರಣಗಳಲ್ಲಿ 16 ಲಕ್ಷದ 40 ಸಾವಿರ ರೂ. ಮೌಲ್ಯದ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೆಚ್ ಟಿ ಶೇಖರ್ ಇವರ ಮಾರ್ಗದರ್ಶನದಲ್ಲಿ ಸಾಗರ ಟೌನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಹಾಬಲೇಶ್ವರ್, ಪಿಎಸ್ಐ ಸಾಗರ್ಕರ್, ಪಿಎಸ್ಐ ಯಲ್ಲಪ್ಪ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಕಾಳಾನಾಯ್ಕ್, ಸಂತೋಷ್, ವಿಶ್ವನಾಥ್, ಮಲ್ಲೇಶ್,ಶ್ರೀಧರ್ ಹಾಗೂ ಸನಾವುಲ್ಲಾ ಉಪಸ್ಥಿತರಿದ್ದರು.