ಕರ್ನಾಟಕ

karnataka

ETV Bharat / state

ನಕಲಿ ರಸಗೊಬ್ಬರ ಮಾರಾಟದ ಬಗ್ಗೆ ದೂರು ನೀಡಿ: ಕೃಷಿ ಇಲಾಖೆ - Department of Agriculture

ನಕಲಿ ರಸಗೊಬ್ಬರದ ಹಾವಳಿ ತಪ್ಪಿಸಲು ರೈತರು ಮಾಹಿತಿ ನೀಡುವಂತೆ ಶಿವಮೊಗ್ಗ ಕೃಷಿ ಇಲಾಖೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.

dsd
ಕೃಷಿ ಇಲಾಖೆ ಪ್ರಕಟಣೆ

By

Published : Jan 21, 2021, 5:25 PM IST

ಶಿವಮೊಗ್ಗ: ಪರವಾನಗಿ ಇಲ್ಲದೆ ನಕಲಿ ರಾಸಾಯನಿಕ ಗೊಬ್ಬರ ಮಾರಾಟ ಅಥವಾ ನೇರವಾಗಿ ರೈತರ ಜಮೀನಿಗೆ ನೀಡುತ್ತಿರುವುದು ಕಂಡುಬಂದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ನಕಲಿ ರಾಸಾಯನಿಕ ಗೊಬ್ಬರಗಳು ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ವಿಷಪೂರಿತವಾದ ರಾಸಾಯನಿಕಗಳನ್ನು ಒಳಗೊಂಡಿದ್ದು, ಇದನ್ನು ಬಳಸಿದರೆ ಭೂಮಿ ಮತ್ತು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ. ರೈತರು ಯಾವುದೇ ಕಾರಣಕ್ಕೂ ಕಡಿಮೆ ದರದಲ್ಲಿ ಸಿಗುವ ಇಂತಹ ಗೊಬ್ಬರ ಬಳಸಬಾರದೆಂದು ಸಹಾಯಕ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

ABOUT THE AUTHOR

...view details