ಕರ್ನಾಟಕ

karnataka

ETV Bharat / state

ಸ್ವಯಂ ಘೋಷಿತ ಆಸ್ತಿ ತೆರಿಗೆ ರಿಯಾಯಿತಿ:  ಅವಧಿ ವಿಸ್ತರಿಸಲು ಆಗ್ರಹ - Shimoga civil welfare forum

ಮಹಾನಗರ ಪಾಲಿಕೆಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಕಟ್ಟಲು ಘೋಷಿಸಿರುವ ರಿಯಾಯಿತಿ ಈ ತಿಂಗಳಿಗೆ ಕೊನೆಯಾಗಲಿದ್ದು, ಈ ರಿಯಾಯಿತಿಯನ್ನುಇನ್ನೂ ಮೂರು ತಿಂಗಳು ಮುಂದುವರೆಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

Demand to extend the self-declared property tax exemption period
ಸ್ವಯಂ ಘೋಷಿತ ಆಸ್ತಿ ತೆರಿಗೆ ರಿಯಾಯಿತಿ ಅವಧಿ ವಿಸ್ತರಿಸಲು ಆಗ್ರಹ

By

Published : May 21, 2020, 4:19 PM IST

ಶಿವಮೊಗ್ಗ: ಸ್ವಯಂ ಘೋಷಿತ ಆಸ್ತಿ ತೆರಿಗೆ ರಿಯಾಯಿತಿ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಸ್ವಯಂ ಘೋಷಿತ ಆಸ್ತಿ ತೆರಿಗೆ ರಿಯಾಯಿತಿ ಅವಧಿ ವಿಸ್ತರಿಸಲು ಆಗ್ರಹ

ಮಹಾನಗರಪಾಲಿಕೆಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಕಟ್ಟಲು ಶೇಕಡಾ 5 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ರಿಯಾಯಿತಿ ಈ ತಿಂಗಳು ಮಾತ್ರ ಇದ್ದು, ಇದನ್ನು ಕಟ್ಟಲು ಸದ್ಯ ಕಷ್ಟಸಾಧ್ಯವಾದ್ದರಿಂದ ರಿಯಾಯಿತಿಯನ್ನುಇನ್ನೂ ಮೂರು ತಿಂಗಳು ಮುಂದುವರೆಸಬೇಕು. ಅಲ್ಲದೇ ಪ್ರಸಕ್ತ ಸಾಲಿನ ಆಸ್ತಿ ತೆರಿಗೆಗೆ ಮಾರ್ಚ್ 31- 2021ರವರೆಗೆ ಯಾವುದೇ ರೀತಿಯ ಬಡ್ಡಿ ವಿಧಿಸಬಾರದು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ABOUT THE AUTHOR

...view details