ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ಮಾತನಾಡಿದರು. ಶಿವಮೊಗ್ಗ:ಖಚಿತವಾಗಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜೆಡಿಎಸ್ದಿಂದ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು. ಶಿವಮೊಗ್ಗ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ನನ್ನ ಜತೆ ಬೇಟೆಗಾರರು ಇದ್ದಾರೆ. ನನ್ನ ಎಡಬಲದಲ್ಲಿ ಜನರ ಚುನಾವಣೆಯ ನಾಡಿಮಿಡಿತವನ್ನು ಬಲ್ಲವರು ಇದ್ದಾರೆ. ಈ ಬಾರಿ ಚುನಾವಣೆಯನ್ನು ನಾವು ಗೆಲ್ಲುತ್ತೇವೆ ಎಂದು ಹೇಳಿದರು.
ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಗೆಲ್ಲುವ ಅವಕಾಶವಿದೆ. ನಮ್ಮದು ಬಿಜೆಪಿಯ ಬಿ ಟೀಂ ಅಲ್ಲ. ಬಿಜೆಪಿರವರು ಬಂದು ಕೇಳಿದ್ರು ನಾವು ಆಗಲ್ಲ ಎಂದ್ವಿ ಎಂದು ಹಾಸ್ಯದ ದಾಟಿಯಲ್ಲಿ ಆಯನೂರು ಹೇಳಿದ್ರು. ಹಿಂದಿನ ಬಾರಿ ಪ್ರಸನ್ನ ಎರಡನೇ ಸ್ಥಾನದಲ್ಲಿದ್ದರು. ನಮಗೆ ಅಲ್ಪಸಂಖ್ಯಾಂತರ ಮತಗಳು ಬರುತ್ತವೆ. ನಮಗೆ ಕಾಂಗ್ರೆಸ್ ಹಾಗೂ ಬಿಜೆಪಿಯಿಂದಲೂ ವೋಟ್ಗಳು ಬರುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಫೋನ್ ಎಲ್ಲಿಂದ ಬರುತ್ತದೆಯೋ ಗೂತ್ತಿಲ್ಲ. ಅವರಿಗೆ ಹಿಂದೆ ಕಾರ್ಯಕರ್ತರು ಬೇಕು. ಅಂದಾಗ ದುಬೈನಿಂದ ಫೋನ್ ಬರುತ್ತದೆ. ಮೋದಿ ರಾಷ್ಟ್ರೀಯ ನಾಯಕರು, ಅವರ ಫೋನ್ ಬಂದಿರಬಹುದು. ನಮಗೆ ನಮಗಿಂತ ಒಳ್ಳೆ ನಟರು ಬೇಕಿಲ್ಲ. ಆದರೆ ಪಕ್ಷ ತೀರ್ಮಾನ ಏನೂ ಮಾಡುತ್ತದೆಯೋ ಗೂತ್ತಿಲ್ಲ. ನಾವು ಒಂದೇ ಒಂದು ಮತದಿಂದ ಗೆಲ್ಲುತ್ತೇವೆ ಎಂದು ವಿವರಣೆ ನೀಡಿದರು.
ಜೆಡಿಎಸ್ಗೆ ಸೇರ್ಪಡೆಗೊಂಡ ಕೆ ಬಿ ಪ್ರಸನ್ನ ಕುಮಾರ್ ಮಾತನಾಡಿ, ನಾನು ನಿನ್ನೆ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದೇವೆಗೌಡರ ಆಶೀರ್ವಾದ ಪಡೆದು ಜೆಡಿಎಸ್ಗೆ ಸೇರ್ಪಡೆ ಆಗಿದ್ದೇನೆ. ಆಯನೂರು ಮಂಜುನಾಥರನ್ನು ಗೆಲ್ಲಿಸುವ ದೃಷ್ಟಿಯಿಂದ ನಗರದಲ್ಲಿ ಶಾಂತಿ ಕಾಪಾಡುವುದು, ನಗರದ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಕ್ಕೆ ಬಂದಿರುವೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಅವರ ನೇತೃತ್ವದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಪಕ್ಷವನ್ನು ಬಲಿಷ್ಠ ಪಡಿಸಲಾಗುವುದು. ನಗರದ ಶಾಂತಿ ಕದಡುವ ಪ್ರಯತ್ನ ಮಾಡುವರು ಒಂದು ಕಡೆ ಅಭ್ಯರ್ಥಿ ನಡೆದ ಗಲಾಟೆಗೆ ಸಿಹಿ ಹಂಚುವ ಅಭ್ಯರ್ಥಿ ಇನ್ನೂಂದು ಕಡೆ ಇದ್ದಾರೆ. ಹೀಗಾಗಿ ಜೆಡಿಎಸ್ ಸೇರ್ಪಡೆಗೆ ನಿರ್ಧರಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಮನಸ್ಥಿತಿ ಶಾಂತಿಯನ್ನು ಕಾಪಾಡುವುದು ಅಲ್ಲ, ಎಂದು ಆರೋಪಿಸಿದರು.
ಆಯನೂರು ಮಂಜುನಾಥ್ ಗೆಲ್ಲಿಸುವುದು ಹಾಗೂ ಶಾಂತಿಯನ್ನು ಬಯಸುವ ಬಹಳ ಜನ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ ಆಗಲಿದ್ದಾರೆ. ಜೆಡಿಎಸ್ ಸೇರಲು ಯಾವ ಕಾಂಗ್ರೆಸ್ನವರಿಗೆ ಒತ್ತಡ ಮಾಡುತ್ತಿಲ್ಲ. ನಾವು ಒಂದೇ ಮತದಿಂದ ಆದರೂ ಈ ಬಾರಿ ಸಹ ಗೆಲ್ಲುತ್ತೆವೆ. ನಗರದಲ್ಲಿ ಯಾವ ಸರ್ಕಲ್ ಗೆ ಹೋದ್ರು ಪೊಲೀಸರ ಬ್ಯಾರಿಕೇಟ್ ಇರುತ್ತದೆ. ಅದನ್ನೆಲ್ಲ ತೆರವು ಮಾಡುತ್ತೇವೆ. ಕೋಮುವಾದಗಳಿಗೆ ಕಾರಣ ಆಗುವ ಆಭ್ಯರ್ಥಿಗೆ ಜನ ರೆಸ್ಟ್ ನೀಡಿದ್ರೆ ಅದು ಸರಿ ಆಗುತ್ತದೆ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಇದನ್ನೂಓದಿ:ಸಂದರ್ಭ ಬಂದರೆ ಸಿದ್ದರಾಮಯ್ಯ, ಡಿಕೆಶಿಯನ್ನು ಜೈಲಿಗೆ ಹಾಕುವವರೇ.. ಎಲ್ಲದಕ್ಕೂ ಸಮಯ ಬರಬೇಕು: ಈಶ್ವರಪ್ಪ ಗರಂ