ಕರ್ನಾಟಕ

karnataka

ETV Bharat / state

ರಾಜ್ಯ ನೆರೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ರೈತ ಸಂಘದಿಂದ ಆಗ್ರಹ - natural Disater

ರಾಜ್ಯದಲ್ಲಿ ಉಂಟಾದ ಪ್ರಕೃತಿ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಯಿತು.

ರೈತ ಸಂಘದಿಂದ ಆಗ್ರಹ

By

Published : Aug 26, 2019, 10:45 PM IST

ಶಿವಮೊಗ್ಗ: ರಾಜ್ಯದಲ್ಲಿ ಉಂಟಾದ ಪ್ರಕೃತಿ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಹಾಗೂ ಬ್ರಿಟಿಷ್‌ ಕಾಲದ ಪ್ರಕೃತಿ ವಿಕೋಪ ಮಾರ್ಗ ಸೂಚಿಯನ್ನು ಬದಲಾವಣೆ ಮಾಡಬೆಕೇಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಈ ವೇಳೆ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಮಾತನಾಡಿ, ಪ್ರವಾಹದಲ್ಲಿ ಮೃತರಾದ ಕುಟುಂಬಕ್ಕೆ ಈ ಕೂಡಲೇ ಸರ್ಕಾರ 25 ಲಕ್ಷ ಪರಿಹಾರ ನೀಡಬೇಕು. ಕರ್ನಾಟಕದ ಪ್ರಕೃತಿ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಕೇಂದ್ರ ಸರ್ಕಾರದ ಬ್ರಿಟಿಷ್‌ ಕಾಲದ ಪ್ರಕೃತಿ ವಿಕೋಪ ಪರಿಹಾರ ಕಾರ್ಯಸೂಚಿಯನ್ನು ಬದಾಲಾಯಿಸಬೇಕು. ಹಾಗೂ ಬೆಳೆ ವಿಮೆ ಹಣವನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಿ, ಮನೆ ಕಟ್ಟಿಕೊಳ್ಳಲು 10 ಲಕ್ಷ ಪರಿಹಾರ ನೀಡಬೇಕೆಂದು ಎಂದು ಒತ್ತಾಯಿಸಿದರು.

ರೈತ ಸಂಘದಿಂದ ಆಗ್ರಹ

ಈ ಎಲ್ಲಾ ಬೇಡಿಕೆಗಳನ್ನ ಈಡೇರಿಸದೆ ಮುಂದಿನ ಚುನಾವಣೆಯಲ್ಲಿ ಓಟು ಕೇಳಲು ಬರಬೇಡಿ. ರಾಜಕೀಯ ಡೊಂಬರಾಟಗಳನ್ನ ಬಿಟ್ಟು ರಾಜ್ಯದ ಜನರ ನೇರವಿಗೆ ಬನ್ನಿ. ದೇಶಕ್ಕೆ ಅನ್ನ ನೀಡುವ ರೈತ ಗಂಜಿ ಕೇಂದ್ರದಲ್ಲಿ ಬೇಡಿ ತಿನ್ನುವ ಪರಿಸ್ಥಿತಿಗೆ ಬಂದಿದ್ದಾನೆ ಎಂದರು.

ABOUT THE AUTHOR

...view details