ಶಿವಮೊಗ್ಗ: ದೇಶದಲ್ಲಿ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಹಳ್ಳಿ ಈಸೂರನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಬೇಕು ಎಂದು ಈಸೂರು ಗ್ರಾಮದ ಡಾ. ರಿಯಾಜ್ ಬಾಷ ಆಗ್ರಹಿಸಿದರು.
ಈಸೂರನ್ನ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿ: ಡಾ. ರಿಯಾಜ್ ಬಾಷ - ಶಿವಮೊಗ್ಗ ಸುದ್ದಿಗೋಷ್ಠಿ
ದೇಶದಲ್ಲಿ ಮೊದಲು ಸ್ವತಂತ್ರ ಘೋಷಿಸಿಕೊಂಡ ಹಳ್ಳಿ ಈಸೂರನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಬೇಕು ಎಂದು ಈಸೂರು ಗ್ರಾಮದ ಡಾ.ರಿಯಾಜ್ ಬಾಷ ಆಗ್ರಹಿಸಿದರು.
![ಈಸೂರನ್ನ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿ: ಡಾ. ರಿಯಾಜ್ ಬಾಷ](https://etvbharatimages.akamaized.net/etvbharat/prod-images/768-512-4809389-thumbnail-3x2-vid.jpg)
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1942ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಏಸೂರು ಕೊಟ್ಟರು ಈಸೂರು ಕೊಡೆವು ಎಂಬ ಘೋಷಣೆಯೊಂದಿಗೆ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಹಳ್ಳಿ ಎಂದರೆ ಈಸೂರು. ಆದರೆ ಆ ಹಳ್ಳಿಗೆ ಸಿಗಬೇಕಾದ ಯಾವುದೇ ಮಾನ್ಯತೆಗಳು ಇನ್ನೂ ಸಿಕ್ಕಿಲ್ಲ. ಹಾಗಾಗಿ ಈಸೂರನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು ಹಾಗೂ ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಕೇವಲ ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ದಿನಾಚರಣೆಯಂದು ಮಾತ್ರ ಈಸೂರನ್ನು ನೆನಪಿಸಿಕೊಳ್ಳುತ್ತಾರೆ ಹೊರತು ಬೇರೆ ಸಮಯದಲ್ಲಿ ಅಲ್ಲ. ಹಾಗಾಗಿ ಈಸೂರಿನಲ್ಲಿ ಸ್ವಾತಂತ್ರ್ಯ ಉದ್ಯಾನವನ ನಿರ್ಮಿಸಬೇಕು. ಈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಬೇಕು. ಈಸೂರನ್ನು ಸಬರಮತಿ ಆಶ್ರಮದಂತೆ ಮಾಡಬೇಕು. ಹೀಗೆ ಈಸೂರಿನ ಸಮಗ್ರ ಅಭಿವೃದ್ಧಿಯನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಮಾಡಬೇಕು ಎಂದು ಆಗ್ರಹಿಸಿದರು.