ಶಿವಮೊಗ್ಗ: ಕೊರೊನಾ ಮಹಾಮಾರಿಗೆ ಸಹೋದರರಿಬ್ಬರು ಬಲಿಯಾಗಿರುವ ಘಟನೆ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಕರಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದ್ಲಕೊಪ್ಪ ಗ್ರಾಮದ ಸುರೇಶ್(58) ಹಾಗೂ ಗುರುರಾಜ್ ಶೇಟ್(51) ಕೊರೊನಾದಿಂದ ಮೃತಪಟ್ಟ ಸಹೋದರರು.
ಸುರೇಶ್ ಕಳೆದ ಭಾನುವಾರ ಕೊರೊನಾ ಉಲ್ಬಣಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.