ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ಏಕದಂತ ಎಂಬ ಹೆಸರಿನ ಆನೆ ಸಾವನ್ನಪ್ಪಿದೆ.
ಸಕ್ರೆಬೈಲು ಆನೆ ಬಿಡಾರದ ಏಕ'ದಂತ' ಅನಾರೋಗ್ಯದಿಂದ ಸಾವು - ಶೆಟ್ಟಿಹಳ್ಳಿ ಅರಣ್ಯ ಪ್ರದೇಶ
ಏಕದಂತ ಆನೆ ಅತ್ಯಂತ ದಷ್ಟಪುಷ್ಟವಾಗಿದ್ದು, ಸಕ್ರೆಬೈಲಿನ ವೈದ್ಯ ವಿನಯ್ ಚಕಿತ್ಸೆ ನೀಡುತ್ತಿದ್ದರು. ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ, ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲೆ ಅಂತ್ಯ ಸಂಸ್ಕಾರ ಮಾಡಲಾಯಿತು.
ಸಕ್ರೆಬೈಲು ಆನೆ ಬಿಡಾರದ ಏಕ'ದಂತ' ಅನಾರೋಗ್ಯದಿಂದ ಸಾವು
ಏಕದಂತ ಆನೆಗೆ ಕಳೆದ ಎರಡು ದಿನಗಳಿಂದ ಅನಾರೋಗ್ಯ ಉಂಟಾಗಿದ್ದು, ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಏಕದಂತ ಆನೆಗೆ 35 ವರ್ಷ ವಯಸ್ಸಾಗಿತ್ತು. ಈ ಆನೆಯನ್ನು ಎರಡು ವರ್ಷದ ಹಿಂದೆ ಹಾಸನದ ಸಕಲೇಶಪುರದಿಂದ ಸೆರೆ ಹಿಡಿದು ಕರೆ ತರಲಾಗಿತ್ತು. ಈ ಆನೆಗೆ ಒಂದೇ ದಂತವಿದ್ದ ಕಾರಣ ಇದಕ್ಕೆ ಏಕದಂತ ಎಂದು ನಾಮಕಾರಣ ಮಾಡಲಾಗಿತ್ತು.
ಏಕದಂತ ಆನೆ ಅತ್ಯಂತ ದಷ್ಟಪುಷ್ಟವಾಗಿದ್ದು, ಸಕ್ರೆಬೈಲಿನ ವೈದ್ಯ ವಿನಯ್ ಚಿಕಿತ್ಸೆ ನೀಡುತ್ತಿದ್ದರು. ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ, ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲೆ ಅಂತ್ಯ ಸಂಸ್ಕಾರ ಮಾಡಲಾಯಿತು.