ಶಿವಮೊಗ್ಗ: ನಗರದ ಹೊರವಲಯ ಮಲವಗೊಪ್ಪದ ಯಲವಟ್ಟಿ ತಿರುವಿನಲ್ಲಿ ಬುಧವಾರ ರಾತ್ರಿ 9ರ ಸುಮಾರಿಗೆ ಓರ್ವ ಮಹಿಳೆ ಮತ್ತು ಪುರುಷನ ಮೃತದೇಹ ದೊರೆತಿದೆ. ಮೃತದೇಹಗಳ ಪಕ್ಕದಲ್ಲಿ ವಿಷದ ಬಾಟಲಿ ಸಿಕ್ಕಿರುವುದರಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮೃತರು ಯಾರು, ಎಲ್ಲಿಂದ ಬಂದವರು, ಹೆಸರೇನು ಎಂಬುದು ತಿಳಿದು ಬಂದಿಲ್ಲ. ಇಬ್ಬರೂ ಅಂದಾಜು 50 ವರ್ಷ ಮೇಲ್ಪಟ್ಟವರಾಗಿದ್ದಾರೆ. ಯಾವುದೇ ಗುರುತಿನ ದಾಖಲೆ ಪತ್ರಗಳು ಲಭ್ಯವಾಗಿಲ್ಲ.