ಶಿವಮೊಗ್ಗ :ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗ ಸಮೀಪದ ಹುಣಸೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸುಟ್ಟು ಕರಕಲಾದ ಕಾರೊಂದು ಪತ್ತೆಯಾಗಿದೆ.ಅದರೊಳಗೆ ವ್ಯಕ್ತಿಯೋರ್ವನ ಮೃತದೇಹವೂ ಪತ್ತೆಯಾಗಿದೆ.
ಕೆಎ 15 ಎಂ 3934 ನಂಬರ್ನ ಸ್ವಿಫ್ಟ್ ಕಾರು ಸುಟ್ಟು ಭಸ್ಮವಾಗಿದೆ. ಕಾರಿನೊಳಗೆ ಚಾಲಕನ ಸೀಟ್ನಲ್ಲಿ ಮೃತದೇಹವೂ ಸಹ ಪತ್ತೆಯಾಗಿದೆ.
ಆದರೆ, ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಕಳೆದೊಂದು ವಾರದಿಂದಲೂ ಈ ಭಾಗದಲ್ಲಿ ಮಳೆಯಾಗುತ್ತಿದೆ. ಈ ಸಮಯದಲ್ಲಿ ಕಾರಿಗೆ ಬೆಂಕಿ ಬಿದ್ದಿರುವ ಸಾಧ್ಯತೆ ಕಡಿಮೆ.
ಕೊಲೆಯಾಗಿರುವ ಅನುಮಾನ ಸಹ ವ್ಯಕ್ತವಾಗ್ತಿದೆ. ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಸಿಂದಗಿ ವಿಧಾನಸಭಾ ಉಪಚುನಾವಣೆ ಘೋಷಣೆ : ಅಭ್ಯರ್ಥಿಗಳ ಆಯ್ಕೆಗೆ ಭರ್ಜರಿ ಕಸರತ್ತು