ಶಿವಮೊಗ್ಗ: ಬಾಲರಾಜ್ ಅರಸ್ ರಸ್ತೆಯ ಕೇಂದ್ರ ಬ್ಯಾಂಕ್ನ ಮೇಲ್ಭಾಗದಲ್ಲಿ ನಡೆದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬೈಲಾ ತಿದ್ದುಪಡಿ ವಿಚಾರವಾಗಿ ಸಭೆ ಸಂಪೂರ್ಣ ಗದ್ದಲಮಯವಾಗಿತ್ತು.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆ: ಬೈಲಾ ತಿದ್ದುಪಡಿ ವಿಚಾರದಲ್ಲಿ ಗದ್ದಲ - Bylaw Amendment Issue
ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯ ಕೇಂದ್ರ ಬ್ಯಾಂಕ್ನ ಮೇಲ್ಭಾಗದಲ್ಲಿ ನಡೆದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಲವು ವಿಚಾರಗಳ ಕುರಿತು ಸಭೆ ಸಂಪೂರ್ಣ ಗದ್ದಲಮಯವಾಗಿತ್ತು.
ಡಿಸಿಸಿ ಬ್ಯಾಂಕ್
ಸಭೆಯಲ್ಲಿ ಬ್ಯಾಂಕ್ನ ಬೈಲಾ ತಿದ್ದುಪಡಿ ಮಾಡಬೇಕು ಎಂಬುದರ ಕುರಿತು ಸುದೀರ್ಘವಾಗಿ ಚರ್ಚೆ ನಡೆಯಿತು. ಈ ಬೈಲಾದಲ್ಲಿ ಹಾಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ನಿರ್ದೇಶಕರಾಗಿ ಜಿಲ್ಲಾ ಸಹಕಾರ ಇಲಾಖೆಯ ರಿಜಿಸ್ಟ್ರಾರ್ ಇರುತ್ತಾರೆ. ಇದನ್ನು ರದ್ದು ಮಾಡಿ, ರಿಜಿಸ್ಟ್ರಾರ್ ಬೇಡ ಎಂಬ ಚರ್ಚೆ ಪ್ರಾರಂಭವಾಗುತ್ತಿದ್ದಂತಯೇ ಸಭೆಯಲ್ಲಿ ಗದ್ದಲ ಪ್ರಾರಂಭವಾಯಿತು. ಮಾಜಿ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ ಬಣ ಡಿಆರ್ ಬೇಡ ಎಂದರೆ, ಇನ್ನೂಂದು ಬಣ ಬೇಕು ಎಂದು ಪಟ್ಟು ಹಿಡಿಯಿತು.