ಶಿವಮೊಗ್ಗ:ಶಾಲೆಗಳು ತಮ್ಮ ಶೈಕ್ಷಣಿಕ ವರ್ಷದ ಕಾರ್ಯಾ ಚಟುವಟಿಕೆಗಳನ್ನು ಪ್ರಾರಂಭಿಸಿದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ನಗರದ ದುರ್ಗಿಗುಡಿ ಸರ್ಕಾರಿ ಶಾಲೆಗೆ ಭೇಟಿ ನೀಡಿದರು.
ಶಾಲೆಗಳು ಪುನಾರಂಭ... ದುರ್ಗಿಗುಡಿ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪಾಠ ಮಾಡಿದ ಡಿಸಿ - undefined
ಇಂದು ಜಿಲ್ಲಾಧಿಕಾರಿಗಳು ನಗರದಲ್ಲಿರುವ ದುರ್ಗಿಗುಡಿ ಸರ್ಕಾರಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಂಡು ಕಿವಿ ಮಾತು ಹೇಳಿದರು.
![ಶಾಲೆಗಳು ಪುನಾರಂಭ... ದುರ್ಗಿಗುಡಿ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪಾಠ ಮಾಡಿದ ಡಿಸಿ](https://etvbharatimages.akamaized.net/etvbharat/prod-images/768-512-3416159-thumbnail-3x2-bngg.jpg)
ಶಾಲೆ ಪ್ರಾರಂಭವಾಗಿ ಪ್ರಾರ್ಥನೆ ಸಲ್ಲಿಸುವ ವೇಳೆ ಶಾಲೆಗೆ ಭೇಟಿ ನೀಡಿದ ಡಿಸಿ, ಶಾಲೆಯ ಕೊಠಡಿಗಳ ಪರಿಶೀಲನೆ ನಡೆಸಿದರು. ಪ್ರಾರ್ಥನೆಯ ಬಳಿಕ ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ತರಗತಿಯನ್ನ ತೆಗೆದುಕೊಂಡರು. ಬಳಿಕ ಮಾತನಾಡಿ, ಶಾಲೆಗೆ ಬರುವ ನೀವೆಲ್ಲ ಅದೃಷ್ಟವಂತರು. ಕೆಲವರಿಗೆ ಓದುವ ಆಸೆ ಇದ್ದರೂ ಸಹ ಅವರಿಗೆ ಶಾಲೆಗೆ ಬರುವುದಕ್ಕೆ ಆಗುತ್ತಿರಲಿಲ್ಲ. ಆದರೆ, ನಿಮಗೆ ಮನೆಯಲ್ಲಿ ತಂದೆ-ತಾಯಿ ಇದ್ದು, ಶಾಲೆಗೆ ಕಳುಹಿಸುತ್ತಿದ್ದಾರೆ. ಇದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.
ಸರ್ಕಾರ ನಿಮಗೆ ಒಳ್ಳೆಯ ಶಾಲೆಯನ್ನೇ ನೀಡಿದೆ. ಇಲ್ಲಿ ಒಳ್ಳೆಯ ಕೊಠಡಿ ಇದ್ದು, ಪಾಠ ಮಾಡಲು ಒಳ್ಳೆಯ ಶಿಕ್ಷಕರಿದ್ದಾರೆ. ನೀವೆಲ್ಲ ಉತ್ತಮವಾಗಿ ಓದಿ ದೇಶಕ್ಕೆ ಸೇವೆ ಮಾಡಬೇಕು. ವಿದ್ಯಾರ್ಥಿಗಳಾದ ನೀವು ತಾಳ್ಮೆಯಿಂದ ಓದಿ, ಮುಂದಿನ ಜೀವನ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.