ಶಿವಮೊಗ್ಗ:ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಇಂದು ಸಂಜೆ ಶಿವಮೊಗ್ಗ ಹೊರವಲಯದ ಸುಬ್ಬಯ್ಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಸುಬ್ಬಯ್ಯ ಆಸ್ಪತ್ರೆಯಲ್ಲಿ ಕೊರೊನಾ ವಾರ್ಡ್ ರಚನೆ ಮಾಡಿದ್ದು, ಇಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂಬ ದೂರುಗಳು ಬಂದಿದ್ದವು.
ಕೋವಿಡ್ ವಾರ್ಡ್ಗಳಿಗೆ ವೈದ್ಯರು ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಬೇಕು. ಕೋವಿಡ್ ವಾರ್ಡ್ನಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು, ರೋಗಿಗಳಿಗೆ ಸಂಬಂಧಿಕರ ಜೊತೆ ಮಾತನಾಡಲು ದೂರವಾಣಿ ಅಳವಡಿಸಬೇಕು, ಸರಿಯಾದ ಆಹಾರ ಪೂರೈಕೆ ಮಾಡಬೇಕು, ಸರಿಯಾಗಿ ಚಿಕಿತ್ಸಾ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.