ಶಿವಮೊಗ್ಗ :ಕೋವಿಡ್-19 ಹಾವಳಿಯಿಂದ ಭಾರತದ ವಿವಿಧ ರಾಜ್ಯಗಳಿಗೆ ರಫ್ತಾಗದೆ ಉಳಿದು ಹಾಳಾಗುತ್ತಿರುವ ಪೈನಾಪಲ್ ತೋಟಗಳಿಗೆ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಳಾಗುತ್ತಿವೆ ಪೈನಾಪಲ್ ಹಣ್ಣುಗಳು.. ತೋಟಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ - DC Shivakumar
ದೇಶವೇ ಲಾಕ್ಡೌನ್ ಆಗಿದ್ರಿಂದ ಉತ್ತರಭಾರತದಿಂದ ಬರಬೇಕಿದ್ದ ಖರೀದಿದಾರರು ಬಾರದ ಕಾರಣ ಹಣ್ಣುಗಳು ತೋಟದಲ್ಲೇ ನಾಶವಾಗುತ್ತಿವೆ. ಇದರಿಂದ ಡಿಸಿ ಅವರೇ ಖುದ್ದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಡಿಸಿ ಭೇಟಿ ಪರಿಶೀಲನೆ
ಸೊರಬ ಹಾಗೂ ಸಾಗರ ತಾಲೂಕಿನಲ್ಲಿ ನೂರಾರು ಎಕರೆಯಲ್ಲಿ ಸಾವಿರಾರು ಟನ್ ಪೈನಾಪಲ್ ಬೆಳೆಯಲಾಗಿದೆ. ಈ ಬೆಳೆಗಳು ನಿಗದಿತ ಅವಧಿಯಲ್ಲಿ ಕಟಾವು ಆಗಿ ಮಾರುಕಟ್ಟೆ ಸೇರಬೇಕಿತ್ತು. ಆದರೆ, ದೇಶವೇ ಲಾಕ್ಡೌನ್ ಆಗಿದೆ. ಇದರಿಂದ ಉತ್ತರಭಾರತದಿಂದ ಖರೀದಿಗೆ ಬರಬೇಕಿದ್ದ ಖರೀದಿದಾರರು ಬಾರದ ಕಾರಣ ಹಣ್ಣುಗಳು ತೋಟದಲ್ಲೇ ನಾಶವಾಗುತ್ತಿವೆ. ಇದರಿಂದ ಡಿಸಿ ಅವರೇ ಖುದ್ದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ರೈತರ ಜೊತೆ ಚರ್ಚಿಸಿ ಸಮಸ್ಯೆ ಅರಿತುಕೊಂಡರು. ಅಲ್ಲದೆ ಕಕ್ಕರಿಸಿ ಗ್ರಾಮದ ಪೈನಾಪಲ್ ಕೈಗಾರಿಕೆಗೂ ಕೂಡ ಭೇಟಿ ನೀಡಿದರು.