ಕರ್ನಾಟಕ

karnataka

ETV Bharat / state

ಸರ್ಕಾರಿ ನೌಕರರು ಹೊಂದಿರುವ ಬಿಪಿಎಲ್ ಕಾರ್ಡ್ ಹಿಂದಿರುಗಿಸುವಂತೆ ಡಿಸಿ ಖಡಕ್‌ ವಾರ್ನ್‌!! - Shimoga latest news

ಬಿಪಿಎಲ್ ಪಡಿತರ ಚೀಟಿಯ ಸೌಲಭ್ಯವು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗಿದೆ. ಸರ್ಕಾರದಿಂದ ವೇತನ, ಭತ್ಯೆಗಳನ್ನು ಪಡೆಯುವ ಸರ್ಕಾರದ ನಿಗಮ ಮಂಡಳಿ ಇತ್ಯಾದಿಗಳ ಅಧಿಕಾರಿ, ನೌಕರರು ಉಪಯೋಗಿಸಿಕೊಳ್ಳುವುದು ಅಕ್ಷಮ್ಯ ಅಪರಾಧ.

DC shivkumar
DC shivkumar

By

Published : Jun 19, 2020, 7:20 PM IST

ಶಿವಮೊಗ್ಗ :ಸರ್ಕಾರಿ ನೌಕರರು ಹೊಂದಿರುವ ಬಿಪಿಎಲ್ ಕಾರ್ಡ್ ಹಿಂದಿರುಗಿಸುವಂತೆ ಜಿಲ್ಲಾಧಿಕಾರಿ ಶಿವಕುಮಾರ್ ಸೂಚನೆ‌ ನೀಡಿದ್ದಾರೆ.

ಸರ್ಕಾರಿ ನಿಗಮ ಮಂಡಳಿ ಇತ್ಯಾದಿಗಳ ಅಧಿಕಾರಿ ಹಾಗೂ ನೌಕರರು ಬಿಪಿಎಲ್ ಪಡಿತರ ಚೀಟಿ ಪಡೆದು ಉಪಯೋಗಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವ ನೌಕರರು ಅಥವಾ ನೌಕರರ ಅವಲಂಬಿತರು ಜುಲೈ 10ರೊಳಗಾಗಿ ಆಹಾರ ಹಾಗೂ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಹಿಂತಿರುಗಿಸಿ ರದ್ದು ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಬಿಪಿಎಲ್ ಪಡಿತರ ಚೀಟಿಯ ಸೌಲಭ್ಯವು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗಿದೆ. ಸರ್ಕಾರದಿಂದ ವೇತನ, ಭತ್ಯೆಗಳನ್ನು ಪಡೆಯುವ ಸರ್ಕಾರದ ನಿಗಮ ಮಂಡಳಿ ಇತ್ಯಾದಿಗಳ ಅಧಿಕಾರಿ, ನೌಕರರು ಉಪಯೋಗಿಸಿಕೊಳ್ಳುವುದು ಅಕ್ಷಮ್ಯ ಅಪರಾಧವಾಗಿರುತ್ತದೆ.

ನಿಗದಿತ ದಿನಾಂಕದೊಳಗೆ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಿಕೊಳ್ಳದಿದ್ದಲ್ಲಿ ಅಂತಹ ಅಧಿಕಾರಿ ಅಥವಾ ನೌಕರರ ವಿರುದ್ಧ ಶಿಸ್ತು ಕ್ರಮ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದಲ್ಲದೇ, ಅವರಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲು ಮಾಡಲು ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details