ಶಿವಮೊಗ್ಗ:ಕುಟುಂಬದಲ್ಲಿ ಯಾರಾದರೂ ನಿಧನರಾದರೆ ಅವರ ಚಿತೆಗೆ ಪುತ್ರರು ಅಗ್ನಿ ಸ್ಪರ್ಶ ಮಾಡುವುದು ಭಾರತೀಯ ಸಂಪ್ರದಾಯ. ಪುತ್ರಿಯರು ಅಗ್ನಿ ಸ್ಪರ್ಶ ಮಾಡುವುದು ಬಹಳ ಅಪರೂಪ. ಆದರೆ, ನಗರದಲ್ಲಿ ಮೂವರು ಪುತ್ರಿಯರು ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ.
ನಗರದ ಮೈಸೂರು ಕಾಗದ ಕಾರ್ಖಾನೆಯ ಎಂಪಿಎಂನ ನಿವೃತ್ತ ನೌಕರು, ನಿಧಿಗೆ ನಿವಾಸಿ ಜಗನ್ನಾಥ್ ಎಂಬುವವರು ಹಾವು ಕಡಿತದಿಂದ ನಿಧನರಾಗಿದ್ದರು. ಇವರ ಅಂತ್ಯಕ್ರಿಯೆ ಶಿವಮೊಗ್ಗ ರೋಟರಿ ಚಿತಾಗಾರದಲ್ಲಿ ನಡೆಯಿತು.