ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ದಸರಾ: ಅಂಬಾರಿ ಮೇಲೆ ಸಾಗಿದ ತಾಯಿ ಚಾಮುಂಡೇಶ್ವರಿ

ಕೋಟೆ ಆಂಜನೇಯ ದೇವಾಲಯದ ಬಳಿ ವಿಜಯ ದಶಮಿಯ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ ಸೆಲ್ವಮಣಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

By

Published : Oct 5, 2022, 6:11 PM IST

ಅಂಬಾರಿ ಮೇಲೆ ಸಾಗಿದ ತಾಯಿ ಚಾಮುಂಡೇಶ್ವರಿ
ಅಂಬಾರಿ ಮೇಲೆ ಸಾಗಿದ ತಾಯಿ ಚಾಮುಂಡೇಶ್ವರಿ

ಶಿವಮೊಗ್ಗ: ಶಿವಮೊಗ್ಗದಲ್ಲಿ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ವಿಜಯ ದಶಮಿಯ ನಿಮಿತ್ತ ಇಂದು ಕೋಟಿ ಆಂಜನೇಯ ದೇವಾಲಯದಿಂದ ಮೆರವಣಿಗೆ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬನ್ನಿ ಮುಡಿಯುವ ಫ್ರಿಡಂ ಪಾರ್ಕ್​ಗೆ ಸಾಗಲಾಗುತ್ತದೆ.

ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುತ್ತಿರುವುದು

ಶಿವಮೊಗ್ಗದಲ್ಲಿ ಮೈಸೂರು ದಸರಾದಂತೆ ತಾಯಿ ಚಾಮುಂಡಿ ದೇವಿ ಅಂಬಾರಿಯಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ಮಹಾನಗರ ಪಾಲಿಕೆಯಲ್ಲಿನ ತಾಯಿ ಚಾಮುಂಡಿ ದೇವಿಯ ಬೆಳ್ಳಿ ಮಂಟಪವನ್ನು ದಸರಾ ಪ್ರಾರಂಭವಾಗುತ್ತಿದ್ದಂತೆಯೇ ಕೋಟೆ ರಸ್ತೆಯ ಚಂಡಿಕಾ ಪರಮೇಶ್ವರಿ ದೇವಾಲಯದಲ್ಲಿ ಬಳಿ ಇಟ್ಟು ಒಂಬತ್ತು ದಿನ ಪೂಜಿಸಲಾಗುತ್ತದೆ. ವಿಜಯ ದಶಮಿಯ ದಿನವಾದ ಇಂದು ತಾಯಿ ಚಾಮುಂಡಿ ತಂದು ಆನೆಯ ಮೇಲೆ ಕೂರಿಸಲಾಗುತ್ತದೆ‌.

ಕೋಟೆ ಆಂಜನೇಯ ದೇವಾಲಯದ ಬಳಿ ವಿಜಯ ದಶಮಿಯ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ ಸೆಲ್ವಮಣಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ, ನೂತನ ಎಸ್​ಪಿ ಮಿಥುನ್ ಕುಮಾರ್, ಮೇಯರ್ ಸುನೀತ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಆಯುಕ್ತರಾದ ಮಾಯಾಣ್ಣ ಗೌಡ ಸೇರಿದಂತೆ ಪಾಲಿಕೆ ಸದಸ್ಯರು ಹಾಜರಿದ್ದರು.

ಸತತ ಆರನೇ ವರ್ಷ ಅಂಬಾರಿ ಹೊತ್ತ ಸಾಗರ: ಮೈಸೂರಿನಂತೆ ಶಿವಮೊಗ್ಗದಲ್ಲಿ ಅಂಬಾರಿ ಮೆರವಣಿಗೆ ಇರುತ್ತದೆ. ಸಕ್ರೆಬೈಲು ಆನೆ ಬಿಡಾರದ ಜಂಟಲ್ ಮ್ಯಾನ್ ಆನೆಯಾದ ಸಾಗರ ಸತತ ಆರನೇ ವರ್ಷ ಅಂಬಾರಿಯನ್ನು ಹೊತ್ತು ಸಾಗಿದ್ದಾನೆ. ಸಾಗರ ಆನೆಗೆ ನೇತ್ರಾವತಿ ಹಾಗೂ ಭಾನುಮತಿ ಆನೆಗಳು ಸಾತ್​ ನೀಡಿವೆ. ಮೂರು ಆನೆಗಳಿಗೆ ಬಣ್ಣದಿಂದ ಸಿಂಗರಿಸಿ, ಅವುಗಳಿಗೆ ಬಟ್ಟೆ ಹಾಕಿ ಅದರ ಮೇಲೆ ತಾಯಿ ಚಾಮುಂಡಿ ಮಂಟಪ ಇಟ್ಟು ಮೆರವಣಿಗೆ ನಡೆಸಲಾಗುತ್ತದೆ.

ಆನೆಗಳ ಜೊತೆ ವೈದ್ಯ ವಿನಯ್ ಸಿಬ್ಬಂದಿಗಳಿದ್ದರು. ಸಾಗರ ಆನೆಯನ್ನು ಇಮ್ರಿಯಾಜ್ ನೇತ್ರಾವತಿ ಆನೆಯನ್ಜು ಪರ್ವಿಜ್ ಪಾಷಾ , ಭಾನುವತಿ ಆನೆಯನ್ನು ಮಕ್ಬುಲ್ ಅಹಮ್ಮದ್ ನಡೆಸಿದರು. ಆಂಜನೇಯ ದೇವಾಲಯದ ಬಳಿ ತಾಯಿ ಚಾಮುಂಡೇಶ್ವರಿಗೆ ಜಿಲ್ಲಾಧಿಕಾರಿ, ಎಸ್​ಪಿ, ಮೇಯರ್, ತಹಶೀಲ್ದಾರ್ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಪುಷ್ಪ ನಮನ ಸಲ್ಲಿಸಿದರು.

ಮೆರವಣಿಗೆಯು ಕೋಟೆ ಆಂಜನೇಯ ದೇವಾಲಯದಿಂದ ಹೊರಟು, ಎಸ್​ಪಿಎಂ ರಸ್ತೆ ಮೂಲಕ ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ‌ನಾಯಕ ವೃತ್ತ, ನೆಹರು ರಸ್ತೆ ಮೂಲಕ ಗೋಪಿ ವೃತ್ತದಿಂದ ದುರ್ಗಿಗುಡಿ ಮೂಲಕ ಸಂಗೊಳ್ಳಿ ರಾಯಣ್ಣ ರಸ್ತೆ ಮೂಲಕ ಫ್ರೀಡಂ ಪಾರ್ಕ್ ತಲುಪಲಿದೆ.

ಮೆರವಣಿಗೆಯಲ್ಲಿ ಸಾಗಿದ ತಹಶೀಲ್ದಾರ್ ನಾಗರಾಜ್: ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ನಡೆಯುವ ದಸರಾದಲ್ಲಿ ಬನ್ನಿ ಮುಡಿಯುವ ಕಾರ್ಯವನ್ನು ಪ್ರತಿ ವರ್ಷ ತಹಶೀಲ್ದಾರ್ ಅವರು ಮಾಡುತ್ತಾರೆ. ತಹಶೀಲ್ದಾರ್ ಅವರು ಸಹ ಮೆರವಣಿಗೆಯಲ್ಲಿ ಸಾಗುತ್ತಾರೆ. ಮೆರವಣಿಗೆಯಲ್ಲಿ ವೀರಗಾಸೆ, ಮಹಿಳಾ ಡೊಳ್ಳು ಕುಣಿತ, ಗೊಂಬೆ ವೇಷ, ಹುಲಿ ಕುಣಿತ ಇತರೆ ಕಲಾ ತಂಡಗಳಿದ್ದವು. ಅಲ್ಲದೆ ನಗರದ ಸುಮಾರು 150 ಕ್ಕೂ ಹೆಚ್ಚು ದೇವತೆಗಳು ಮೆರವಣಿಗೆಯಲ್ಲಿ ಸಾಗಿದವು.

ಫ್ರೀಡಂ ಪಾರ್ಕ್​ನಲ್ಲಿ ಬನ್ನಿ ಮುಡಿದ ನಂತರ ಆಕರ್ಷಕ ಪಟಾಕಿ ಸಿಡಿಸಲಾಗುತ್ತದೆ. ಇಲ್ಲಿನ‌ ಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತದೆ.

ಓದಿ:ಶಿವಮೊಗ್ಗ: ಪ್ರೇಕ್ಷಕರ ಮನಗೆದ್ದ ಸಂಗೀತ ಸಂಭ್ರಮ ಕಾರ್ಯಕ್ರಮ

ABOUT THE AUTHOR

...view details