ಶಿವಮೊಗ್ಗ: ದಲಿತ ಎಂಬ ಪದವನ್ನು ವಜಾಗೋಳಿಸದೆ ದಲಿತ ಎಂಬ ಪದವನ್ನೆ ಬಳಸಬೇಕು ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿಯ ಜಿಲ್ಲಾಧ್ಯಕ್ಷ ಆರ್ ಸೂರ್ಯನಾರಾಯಣ ಆಗ್ರಹಿಸಿದರು.
ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಎಂ ಗೋವಿಂದ ಕಾರಜೋಳ ಅವರು ದಲಿತ ಎಂಬ ಪದವನ್ನು ಬಳಸಬಾರದು ಎಂದು ಸರ್ಕಾರದ ಪರವಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಕರ್ನಾಟಕ ಮಾದಿಗ ದಂಡೋರ ಸಮಿತಿ ಖಂಡಿಸುತ್ತದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಲಿತ ಎಂಬ ಪದವನ್ನೆ ಬಳಸಬೇಕು ಯಾವುದೇ ಕಾರಣಕ್ಕೂ ದಲಿತ ಎಂಬ ಪದವನ್ನು ವಜಾಗೋಳಿಸಬಾರದು ಎಂದು ಆಗ್ರಹಿಸಿದರು. ನಮ್ಮನ್ನ ನಾವು ಗುರುತಿಸಿಕೊಳ್ಳಲು ಇರುವ ಒಂದೇ ಪದ ಎಂದರೆ ದಲಿತ. ಹಾಗಾಗಿ ದಲಿತ ಪದವನ್ನೆ ಬಳಸಬೇಕು ಎಂದರು.
ಇದರ ಜೊತೆಗೆ ದಲಿತರಿಗೆ ಸಿಗಬೇಕಾದ ಯಾವುದೇ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಹಾಗೂ ರಾಜಕೀಯವಾಗಿ ದಲಿತ ಸಮಾಜಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.