ಶಿವಮೊಗ್ಗ:ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತಷ್ಟು ಕಸುವು ನೀಡಲು ಮತ್ತೊಮ್ಮೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ಪುನರ್ ಆಯ್ಕೆ ಬಯಸಿದ್ದೇನೆ ಎಂದು ಮಾಜಿ ಕಸಾಪ ಅಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಡಿ.ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಳೆದ 29 ವರ್ಷಗಳಿಂದ ಸದಸ್ಯ, ಕಾರ್ಯದರ್ಶಿ, ಅಧ್ಯಕ್ಷನಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ್ದೇನೆ. ಅಧ್ಯಕ್ಷನಾಗಿದ್ದಾಗ ಸಾಹಿತ್ಯ ಗ್ರಾಮದ ಕನಸು ಕಂಡು, ಅದನ್ನು ನನಸು ಮಾಡಿದ್ದೇನೆ. 50 ಲಕ್ಷಕ್ಕೂ ಹೆಚ್ಚು ಅನುದಾನ ನನ್ನ ಅವಧಿಯಲ್ಲೇ ಬಂದಿದೆ. 2011-12ರಲ್ಲಿ ಈ ಅನುದಾನ 1 ಕೋಟಿ ತಲುಪಿತು. ಹೀಗೆ ಕ್ರಿಯಾಶೀಲತೆಯಿಂದ ಕೆಲಸ ಮಾಡಿದ್ದೇನೆ. ತಾಲೂಕು ಭವನಗಳು, ಎಲ್ಲಾ ಹೋಬಳಿಗಳಲ್ಲಿ ಕಸಾಪ ಕಚೇರಿ, ಸಾಹಿತ್ಯ ಹುಣ್ಣೆಮೆ ಕಾರ್ಯಕ್ರಮಗಳು, ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಇವೆಲ್ಲವನ್ನು ಮಾಡಿದ ತೃಪ್ತಿ ನನಗಿದೆ ಎಂದರು.