ಕರ್ನಾಟಕ

karnataka

ETV Bharat / state

ಗ್ರಾಹಕರಿಂದ ದಾಖಲೆ ಕಲೆಹಾಕುವಂತೆ ಕಟಿಂಗ್​ ಶಾಪ್​ಗಳಿಗೆ ಆದೇಶ - ಶಿವಮೊಗ್ಗ ಕಟಿಂಗ್ ಶಾಪ್​ ಮಾಲೀಕರ ಮನವಿ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕ್ಷೌರಿಕರು ಹಸಿರು ವಲಯಗಳ ನಿಯಮ ಸಡಿಲಿಸುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಕ್ಷೌರಕ್ಕೆ ಬರುವ ಗ್ರಾಹಕರಿಂದ ಆಧಾರ್​ ಕಾರ್ಡ್​ ಹಾಗೂ ವಿಳಾಸ ಸಂಗ್ರಹಿಸುವಂತೆ ಆದೇಶ ನೀಡಿದ ಹಿನ್ನೆಲೆ ಈ ಮನವಿ ಮಾಡಿದ್ದಾರೆ.

Customer  details Collection in Barber Shops
ಗ್ರಾಹಕರಿಂದ ದಾಖಲೆ ಕಲೆಹಾಕುವಂತೆ ಕಟಿಂಗ್​ ಶಾಪ್​ಗಳಿಗೆ ಆದೇಶ

By

Published : May 7, 2020, 11:14 PM IST

ಶಿವಮೊಗ್ಗ: ರಾಜ್ಯ‌ ಸರ್ಕಾರ ಲಾಕ್​ಡೌನ್ 3.O ಅನ್ವಯ ಹಸಿರು ಹಾಗೂ ಕಿತ್ತಳೆ ವಲಯಗಳಲ್ಲಿ ಕೆಲ ಸಡಿಲಿಕೆ ನೀಡಿದೆ. ಇದರಿಂದ ಹಸಿರು ವಲಯದಲ್ಲಿರುವ ಶಿವಮೊಗ್ಗದ ಕ್ಷೌರಿಕರು ಅಂಗಡಿ ತೆರೆದಿದ್ದಾರೆ. ಆದರೆ, ಬರುವ ಗ್ರಾಹಕರ ದಾಖಲೆ ಪಡೆದು ಕಟಿಂಗ್​ ಮಾಡಬೇಕು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿರುವುದು ಮಾಲೀಕರ ತಲೆ ಬಿಸಿಗೆ ಕಾರಣವಾಗಿದೆ.

ಜಿಲ್ಲೆ ಸಾಗರ ಪಟ್ಟಣದ ಕ್ಷೌರಿಕರ ಅಂಗಡಿಗೆ ಬರುವವರ ವಿಳಾಸ ಹಾಗೂ ಆಧಾರ್​ ಕಾರ್ಡ್ ಪಡೆಯುವಂತೆ ಸೂಚನೆ ನೀಡಿದ್ದಾರೆ. ಕಟಿಂಗ್​ ಮಾಡುವಾಗ ನೇರವಾಗಿ ಎಲ್ಲರ ಸಂಪರ್ಕಕ್ಕೆ ಬರುವುದರಿಂದ ಕೊರೊನಾ ಹರಡುವ ಭಯವಿದೆ. ಇದರಿಂದ ಕಡ್ಡಾಯವಾಗಿ ಮಾಸ್ಕ್ ಹಾಗೂ ಕೈ ಗವಸು ಧರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಮ್ಮ ಕೆಲಸದ ನಡುವೆ ದಾಖಲೆ ಸಂಗ್ರಹಿಸುವುದು ಕಷ್ಟಕರವಾಗಿದೆ. ದಯವಿಟ್ಟು ದಾಖಲಾತಿ ಪ್ರಕ್ರಿಯೆಯನ್ನು ಕೈಬಿಡುವಂತೆ ಸಾಗರ ಪಟ್ಟಣದ ಕ್ಷೌರಿಕರು ಸಿಎಂ ಬಿಎಸ್​ವೈಗೆ ಮನವಿ ಮಾಡಿದ್ದಾರೆ.

ABOUT THE AUTHOR

...view details