ಶಿವಮೊಗ್ಗ: ಲಾಕ್ಡೌನ್ ನಿಯಮ ಉಲ್ಲಂಘಿಸಿದ ಅಂಗಡಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ವಿನೋಬ ನಗರ ಪೊಲೀಸ್ ಠಾಣೆ ಹಾಗೂ ಆಗುಂಬೆ ಪೊಲೀಸ್ ಠಾಣೆಯಲ್ಲಿ ಒಟ್ಟು 2 ಪ್ರಕರಣ ದಾಖಲಾಗಿದೆ.
ಕರ್ಫ್ಯೂ ನಿಯಮ ಉಲ್ಲಂಘನೆ: ಶಿವಮೊಗ್ಗದಲ್ಲಿ 254 ವಾಹನ ಜಪ್ತಿ ಕೋವಿಡ್ ನಿಯಮ ಮೀರಿ ಅನಗತ್ಯವಾಗಿ ಓಡಾಡುತ್ತಿದ್ದ 254 ವಾಹನಗಳನ್ನು (227 ದ್ವಿ ಚಕ್ರ ವಾಹನಗಳು ಮತ್ತು 03 ಆಟೋಗಳನ್ನು ಹಾಗೂ 24 ಕಾರು) ವಶಪಡಿಸಿಕೊಳ್ಳಲಾಗಿದೆ. IMV ಕಾಯ್ದೆ ಅಡಿಯಲ್ಲಿ ಒಟ್ಟು 305 ಪ್ರಕರಣಗಳನ್ನು ದಾಖಲಿಸಿ ರೂ 1,33,200 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪಾತ್ರೆ ವ್ಯಾಪಾರಿ ವಿರುದ್ಧ ಕೇಸ್:
ಕರ್ಫ್ಯೂ ನಿಯಮ ಉಲ್ಲಂಘಿಸಿ ವ್ಯಾಪಾರದಲ್ಲಿ ತೊಡಗಿದ್ದ ಪಾತ್ರೆ ಅಂಗಡಿ ಮಾಲೀಕನ ವಿರುದ್ದ ಪ್ರಕರಣ ದಾಖಲಿಸಿರುವ ಘಟನೆ ಸೊರಬದ ಆನವಟ್ಟಿಯಲ್ಲಿ ನಡೆದಿದೆ. ಆನವಟ್ಟಿ ಪಟ್ಟಣದ ದಾನಮ್ಮನ ಬಡಾವಣೆಯಲ್ಲಿ ಬಾಬುಜಾನ್ ರಾಜಾಸಾಬ್ ಅವರು ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದರು. ಸಿಪಿಐ ಆರ್.ಡಿ. ಮರುಳಸಿದ್ದಪ್ಪ ಮಾರ್ಗದರ್ಶನಲ್ಲಿ ಪಿಎಸ್ಐ ಪ್ರವೀಣ್ ಕುಮಾರ್ ವಾಲೀಕರ್ ನೇತೃತ್ವದ ತಂಡ ದಾಳಿ ನಡೆಸಿ ಅಂಗಡಿ ಮಾಲೀಕ ಬಾಬುಜಾನ್ ರಾಜಾ ಸಾಬ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಜಿಮ್ ಮಾಲೀಕನ ವಿರುದ್ಧ ಪ್ರಕರಣ:
ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಕಾರಣ ಜಿಮ್ ಸೇರಿದಂತೆ ಹೆಚ್ಚು ಜನ ಸೇರುವ ಜಾಗಗಳನ್ನು ನಿರ್ಬಂಧಿಸಲಾಗಿದೆ. ಆದರೂ ಶಿವಮೊಗ್ಗ ವಿನೋಬ ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಟ್ರಾನ್ಸ್‌ಫಾರ್ಮರ್ಸ್ ಎಂಬ ಹೆಸರಿನ ಜಿಮ್ ತೆರೆಯಲಾಗಿತ್ತು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ವಿನೋಬನಗರ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದರು.