ಕರ್ನಾಟಕ

karnataka

ETV Bharat / state

'ವಿರೋಧ ಪಕ್ಷದವರು 'ತಾನು‌ ಕಳ್ಳ, ಪರರ ನಂಬ' ಎಂಬ ಮನಸ್ಥಿತಿಯಲ್ಲಿದ್ದಾರೆ' - ಸಚಿವ ಸಿಟಿ ರವಿ

ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 16ರ ತನಕ ಅವಕಾಶವಿದ್ದು, ಒಂದು ಪಕ್ಷವಾಗಿ ಚುನಾವಣೆಯ ಸಂಪೂರ್ಣ ಸಿದ್ಧತೆಯನ್ನು ನಡೆಸಿದ್ದೇವೆ. ಈಗಾಗಲೇ ಪಕ್ಷದ ವತಿಯಿಂದ ಎರಡೂ ಕ್ಷೇತ್ರಗಳಿಗೆ ಉಸ್ತುವಾರಿಯನ್ನು ನೇಮಕ‌ ಮಾಡಲಾಗಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.

ct-ravi-talk-about-state-by-election-issue-in-shimogga
ವಿರೋಧ ಪಕ್ಷದವರು 'ತಾನು‌ ಕಳ್ಳ, ಪರರನ್ನು ನಂಬ' ಎಂಬ ಮನಸ್ಥಿತಿಯಲ್ಲಿದ್ದಾರೆ: ಸಿಟಿ ರವಿ ಟಾಂಗ್

By

Published : Oct 10, 2020, 3:24 PM IST

ಶಿವಮೊಗ್ಗ: ಶಿರಾ ಹಾಗೂ ಆರ್.​ಆರ್.ನಗರ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳನ್ನು ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡಲಾಗುತ್ತದೆ ಎಂದು ಸಚಿವ ಸಿ.ಟಿ.ರವಿ ನಗರದಲ್ಲಿ ತಿಳಿಸಿದ್ದಾರೆ.

ವಿರೋಧ ಪಕ್ಷದವರು 'ತಾನು‌ ಕಳ್ಳ, ಪರರನ್ನು ನಂಬ' ಎಂಬ ಮನಸ್ಥಿತಿಯಲ್ಲಿದ್ದಾರೆ: ಸಿ.ಟಿ.ರವಿ ಟಾಂಗ್

ಎರಡು ಉಪ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಸಾಮೂಹಿಕ ಪ್ರಯತ್ನದಲ್ಲಿ ಕಾರ್ಯಕರ್ತರು, ಶಾಸಕರು, ಸಚಿವರು ಹಾಗೂ ಸಿಎಂ ಕೆಲಸ ಮಾಡುವುದರಿಂದ‌ ಚುನಾವಣೆ ಗೆಲ್ಲಲು ನಮಗೆ ಕಷ್ಟ ಆಗುವುದಿಲ್ಲ ಎಂದು ಅವರು ಹೇಳಿದರು.

ನಮ್ಮ ಸರ್ಕಾರ ದ್ವೇಷದ ರಾಜಕಾರಣ ಮಾಡಲ್ಲ:

ಉಪ ಚುನಾವಣೆ‌ ನಡೆಯುತ್ತಿರುವ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ದ್ವೇಷದ ರಾಜಕಾರಣ ನಡೆಸಿಲ್ಲ. ನಮ್ಮ ಸರ್ಕಾರದ ಕಡೆಯಿಂದ ಯಾರ ಮೇಲೂ ಸುಮ್ಮನೆ ಕೇಸ್ ಹಾಕಿಲ್ಲ. ವಿರೋಧ ಪಕ್ಷಗಳ ಆರೋಪ ಸುಳ್ಳು, ಅವರು ತಾನು‌ ಕಳ್ಳ, ಪರರನ್ನು ನಂಬ ಎಂಬ ಮನಸ್ಥಿತಿಯಲ್ಲಿದ್ದಾರೆ ಎಂದು ರವಿ ಹೇಳಿದರು.

ABOUT THE AUTHOR

...view details