ಕರ್ನಾಟಕ

karnataka

ETV Bharat / state

ಭ್ರಷ್ಟ ಅಧಿಕಾರಿಗಳು ನಮ್ಮ ಜಮೀನು ಕಬಳಿಸುತ್ತಿದ್ದಾರೆ.. ದಯವಿಟ್ಟು ನಮಗೆ ನ್ಯಾಯ ಕೊಡಿಸಿ! - shimoga news

ಈ ಹಿಂದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪಿಎ ಆಗಿದ್ದ ಮತ್ತು ಹಾಲಿ ಕರ್ನಾಟಕ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಹಾಗೂ ಬಿಜೆಪಿಯ ಮುಖಂಡ ಜ್ಯೋತಿ ಪ್ರಕಾಶ್ ಸೇರಿ ಭ್ರಷ್ಟ ಅಧಿಕಾರಿಗಳು ನಮ್ಮ ಜಮೀನನ್ನು ಕಬಳಿಸಲು ಯತ್ನಿಸುತ್ತಿದ್ದಾರೆಂದು ಮತ್ತೋಡು ಪ್ರಸನ್ನಕುಮಾರ್ ಆರೋಪಿಸಿದ್ದಾರೆ.

ಮತ್ತೋಡು ಪ್ರಸನ್ನಕುಮಾರ್

By

Published : Nov 23, 2019, 5:54 PM IST

ಶಿವಮೊಗ್ಗ: ಈ ಹಿಂದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪಿಎ ಆಗಿದ್ದ ಮತ್ತು ಹಾಲಿ ಕರ್ನಾಟಕ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಹಾಗೂ ಬಿಜೆಪಿಯ ಮುಖಂಡ ಜ್ಯೋತಿ ಪ್ರಕಾಶ್ ಸೇರಿದಂತೆ ಭ್ರಷ್ಟ ಅಧಿಕಾರಿಗಳು ನಮ್ಮ ಜಮೀನನ್ನು ಕಬಳಿಸಲು ಯತ್ನಿಸುತ್ತಿದ್ದಾರೆಂದು ಮತ್ತೋಡು ಪ್ರಸನ್ನಕುಮಾರ್ ಆರೋಪಿಸಿದ್ದಾರೆ.

ಭ್ರಷ್ಟ ಅಧಿಕಾರಿಗಳು ನಮ್ಮ ಜಮೀನು ಕಬಳಿಸುತ್ತಿದ್ದಾರೆ.. ದಯವಿಟ್ಟು ನಮಗೆ ನ್ಯಾಯ ಕೊಡಿಸಿ!

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮತ್ತೋಡು ಗ್ರಾಮದ ಸರ್ವೇ ನಂ. 183ರಲ್ಲಿ ಮೂಲ ಕ್ರಯ ಇಲ್ಲದೇ ಜಮೀನನ್ನು ಭೂ ಪರಿವರ್ತನೆ ಮಾಡಿಸಿ, ಈಶ್ವರ್ ಡೆವಲಪರ್ಸ್ ಹೆಸರಿನಲ್ಲಿ ಸರ್ಕಾರಿ ನೌಕರರಿಗೆ ನಿವೇಶನ ಹಂಚುವ ಮೂಲಕ ನಮ್ಮ ಹೆಸರಿನಲ್ಲಿ ಇರುವ ಜಮೀನನ್ನು ಕಬಳಿಸಲು ಹೊಟಿದ್ದಾರೆ.

ಇದನ್ನು ಪ್ರಶ್ನೆ ಮಾಡಲು ಹೋದರೆ ಪೊಲೀಸರು ನನ್ನ ಮೇಲೆಯೇ ದೂರು ದಾಖಲಿಸಿದ್ದಾರೆ. ನನಗೆ ನ್ಯಾಯ ಪೊಲೀಸ್​ ಠಾಣೆಯಲ್ಲಿ ನ್ಯಾಯ ಸಿಗದ ಕಾರಣ ಪತ್ರಿಕಾಗೋಷ್ಠಿ ಮೂಲಕ ನ್ಯಾಯ ಕೇಳುತ್ತಿದ್ದೇನೆ ಎಂದರು.

ABOUT THE AUTHOR

...view details