ಶಿವಮೊಗ್ಗ:ಬೆಳಕಿನ ಹಬ್ಬ ದೀಪಾವಳಿಯ ಪ್ರಮುಖ ಆಕರ್ಷಣೆಯಾದ ಪಟಾಕಿಗಳ ಮಾರಾಟ ಜಿಲ್ಲೆಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಸಿಡಿಮದ್ಧುಗಳ ದರ ಗಗನಕ್ಕೇರಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಪಟಾಕಿ ದರದಲ್ಲಿ ತುಂಬಾ ಹೆಚ್ಚಳವಾಗಿದೆ.
ಪಟಾಕಿ ದರ ಹೆಚ್ಚಳ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಕೆಲ ಪಟಾಕಿಗಳ ಬೆಲೆಗಳಲ್ಲಿ ಶೇ.40 ರಿಂದ 50 ರಷ್ಟು ದರ ಹೆಚ್ಚಳವಾಗಿದ್ದು, ಗ್ರಾಹಕರು ಅಳೆದುತೂಗಿ ಪಟಾಕಿ ಖರೀದಿಸುವಂತಹ ಸ್ಥಿತಿಯಲ್ಲಿದ್ದಾರೆ.