ಕರ್ನಾಟಕ

karnataka

ETV Bharat / state

ಅಪಘಾತದಲ್ಲಿ ಸಾಕಿದ ಹಸು ಸಾವು.. ರಸ್ತೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು - ಈಟಿವಿ ಭಾರತ್ ಕನ್ನಡ ಸುದ್ದಿ

ಶಿವಮೊಗ್ಗದಿಂದ ಭದ್ರಾವತಿ ಕಡೆ ಹೊರಟಿದ್ದ ಲಾರಿಯೊಂದು ನಗರದ ಮಲವಗೊಪ್ಪ ಬಡಾವಣೆಯ ಹಸುವಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅದು ಮೃತಪಟ್ಟಿದೆ.

ಶಿವಮೊಗ್ಗದಲ್ಲಿ ಅಪಘಾತದಲ್ಲಿ ಸಾಕಿದ ಹಸು ಸಾವು
ಶಿವಮೊಗ್ಗದಲ್ಲಿ ಅಪಘಾತದಲ್ಲಿ ಸಾಕಿದ ಹಸು ಸಾವು

By

Published : Sep 4, 2022, 7:35 PM IST

ಶಿವಮೊಗ್ಗ:ಪ್ರೀತಿಯಿಂದ ಸಾಕಿದ್ದ ಹಸು ಅಪಘಾತದಲ್ಲಿ ಸಾವನ್ನಪ್ಪಿದ್ದಕ್ಕೆ ಮಕ್ಕಳು- ಬಿಕ್ಕಿ ಬಿಕ್ಕಿ ಅತ್ತ ಘಟನೆ ಮಲವಗೊಪ್ಪದಲ್ಲಿ ನಡೆದಿದೆ. ನಗರದ ಮಲವಗೊಪ್ಪ ಬಡಾವಣೆಯ ಹಸುವಿಗೆ ಶಿವಮೊಗ್ಗದಿಂದ ಭದ್ರಾವತಿ ಕಡೆ ಹೊರಟಿದ್ದ ಲಾರಿವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಹಸು ಸ್ಥಳದಲ್ಲೇ ಮೃತಪಟ್ಟಿದೆ.

ಹಸು ಸಾವನ್ನಪ್ಪಿದ ವಿಚಾರ ತಿಳಿಯುತ್ತಿದ್ದಂತೆಯೇ ಮಾಲೀಕರ ಮಕ್ಕಳು ರಸ್ತೆಯಲ್ಲಿಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇವರು ಹಸುವಿಗೆ ಪೂಜಾ ಎಂದು ಹೆಸರಿಟ್ಟಿದ್ದರು. ಹಸು ಮನೆಯವರೊಂದಿಗೆ, ಮಕ್ಕಳೊಂದಿಗೆ ತುಂಬ ಚೆನ್ನಾಗಿಯೇ ಬೆರೆತಿದ್ದರು. ಆದರೆ ಮೇಯಲು ಹೋಗಿದ್ದ ಹಸು ದಿಢೀರನೆ ಸಾವನ್ನಪ್ಪಿದ ವಿಚಾರ ತಿಳಿದ ಮಕ್ಕಳು ಹಸುವಿನ ಬಳಿ ಬಂದು ನಡು ರಸ್ತೆಯಲ್ಲಿಯೇ ಗೋಗರೆದು ಅತ್ತಿದ್ದಾರೆ.

ಶಿವಮೊಗ್ಗದಲ್ಲಿ ಅಪಘಾತದಲ್ಲಿ ಸಾಕಿದ ಹಸು ಸಾವು

ಅಲ್ಲಿ ನೆರೆದಿದ್ದವರು ಎಷ್ಟು ಸಮಾಧಾನ ಮಾಡಿದ್ರು, ಪೂಜಾ ಹಸುವನ್ನು ನೆನಪಿಸಿಕೊಂಡು ಮಕ್ಕಳು ಅಳುತ್ತಿದ್ದರು. ಅವರು ಅಳುವುದನ್ನು ಕಂಡ ಸ್ಥಳೀಯರ ಕಣ್ಣುಗಳು ತೇವವಾಗಿದ್ದವು.

ಓದಿ:ಮದ್ಯದ ಅಮಲಿನಲ್ಲಿ ಗಣೇಶ ಮೂರ್ತಿಗಳ ವಿರೂಪಗೊಳಿಸಿದ ಯುವಕರು.. ಐವರ ಬಂಧನ

ABOUT THE AUTHOR

...view details