ಕರ್ನಾಟಕ

karnataka

ETV Bharat / state

ಕೋವಿಡ್ ಸೋಂಕಿತರ ಮೃತ ದೇಹಗಳ ಅದಲು-ಬದಲು: ಮೆಗ್ಗಾನ್ ಆಸ್ಪತ್ರೆಯಲ್ಲಿ ಎಡವಟ್ಟು - ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿಯಿಂದ ಎಡವಟ್ಟು

ಕೋವಿಡ್​ನಿಂದ ಮೃತಪಟ್ಟವರ ಶವವನ್ನು ಕೋವಿಡ್ ನಿಯಮಾವಳಿಯ ಪ್ರಕಾರ ಪ್ಯಾಕ್ ಮಾಡಿ ನೀಡಲಾಗುತ್ತಿದೆ. ಇದರಲ್ಲಿ ಮೃತರ ಮುಖವನ್ನು ಫೇಸ್ ಕವರ್ ಹಾಕಿ ಕಾಣುವಂತೆ ಮಾಡಲಾಗುತ್ತದೆ. ಇಷ್ಟಾದರೂ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್​ನಿಂದ ಮೃತರಾದವರ ಶವಗಳನ್ನು ಅದಲು ಬದಲು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

covid-dead-body-exchanege-by-staff-of-meggan-hospital
ಪಡಾಕ್ಷರಿ ಹಾಗೂ ಮಲ್ಲಿಕಾರ್ಜುನ್​

By

Published : May 19, 2021, 7:09 PM IST

ಶಿವಮೊಗ್ಗ: ಕೋವಿಡ್​ನಿಂದ ಮೃತರಾದವರ ದೇಹವನ್ನು ಅದಲು ಬದಲು ಮಾಡಿರುವ ಆರೋಪ ಪ್ರಕರಣ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆಯ ಕೆಂಚಿನಕೊಪ್ಪ ಗ್ರಾಮದ ಮಲ್ಲಿಕಾರ್ಜುನ್ ಕಳೆದ ಆರು ದಿನಗಳಿಂದ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಅದೇ ರೀತಿ ಶಿವಮೊಗ್ಗ ನಗರದ ಶಿವಪ್ರಿಯ ಲೇಔಟ್ ನ ನಿವಾಸಿ ಷಡಾಕ್ಷರಪ್ಪ ಎಂಬುವರು ಸಹ ಕೋವಿಡ್​ನಿಂದ ಮೃತಪಟ್ಟಿದ್ದಾರೆ. ಇವರಿಬ್ಬರ ಶವವನ್ನು ಶವಾಗಾರದಲ್ಲಿ ಇಡಲಾಗಿತ್ತು. ಆದರೆ ಮಲ್ಲಿಕಾರ್ಜುನ್ ಅವರ ಶವದ ಬದಲಿಗೆ ಷಡಾಕ್ಷರಿ ಶವವನ್ನು ಮಲ್ಲಿಕಾರ್ಜುನ ಅವರ ಸಂಬಂಧಿಕರಿಗೆ ನೀಡುವ ಮೂಲಕ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೃತ ಮಲ್ಲಿಕಾರ್ಜುನ ಸಂಬಂಧಿ ನೀಲಪ್ಪ ಮಾತನಾಡಿದರು

ಷಡಾಕ್ಷರಪ್ಪ ಶವವನ್ನು ತೆಗೆದುಕೊಂಡು ಮಲ್ಲಿಕಾರ್ಜುನ ಅವರ ಸಂಬಂಧಿಕರು ಕೆಂಚನಕೊಪ್ಪಕ್ಕೆ ತೆಗೆದುಕೊಂಡು ಹೊರಟಿದ್ದಾರೆ. ನಂತರ ಷಡಾಕ್ಷರಪ್ಪ ಅವರ ಮಗ ತಮ್ಮ ತಂದೆಯ ಶವವನ್ನು ತೆಗೆದುಕೊಂಡು ಹೋಗಲು ಬಂದಾಗ ಅವರ ಕಾರಿಗೆ ಶವವನ್ನು ಹಾಕಿದ್ದಾರೆ. ಈ ವೇಳೆ ಅವರು ಶವದ ಪ್ಯಾಕ್​ ನೋಡಿ ಇದು ನಮ್ಮ ತಂದೆಯವರ ಶವ ಅಲ್ಲ ಎಂದಿದ್ದಾರೆ. ನಂತರ ಅನುಮಾನಗೊಂಡು ಪರೀಕ್ಷಿಸಿದಾಗ ಶವ ಅದಲು- ಬದಲಾಗಿರುವುದು ತಿಳಿದು ಬಂದಿದೆ.

ತಕ್ಷಣ ಶವಾಗಾರದ ಸಿಬ್ಬಂದಿ ಮಲ್ಲಿಕಾರ್ಜುನ್ ಅವರ ಸಂಬಂಧಿಕರಿಗೆ ಫೋನ್ ಮಾಡಿ ಶವ ಬದಲಾಗಿದೆ, ವಾಪಸ್ ಬನ್ನಿ ಎಂದು ಹೇಳಿದ್ದಾರೆ. ಆದರೆ ಇದಕ್ಕೊಪ್ಪದ ಕಾರಣ, ಷಡಾಕ್ಷರಪ್ಪ ಅವರ ಪುತ್ರನೇ ನ್ಯಾಮತಿಗೆ ಹೋಗಿ ತಮ್ಮ ತಂದೆಯ ಶವವನ್ನು ಪಡೆದು‌ಕೊಂಡು ಬಂದಿದ್ದಾರೆ.

ಕೋವಿಡ್​ನಿಂದ ಮೃತರಾದವರ ಶವವನ್ನು ಕೋವಿಡ್ ನಿಯಮಾವಳಿಯ ಪ್ರಕಾರ ಪ್ಯಾಕ್ ಮಾಡಿ ನೀಡಲಾಗುತ್ತಿದೆ. ಇದರಲ್ಲಿ ಮೃತರ ಮುಖವನ್ನು ಫೇಸ್ ಕವರ್ ಹಾಕಿ ಕಾಣುವಂತೆ ಮಾಡಲಾಗುತ್ತದೆ. ಇಷ್ಟಾದರೂ ಸಹ ಶವ ಬದಲಾಗಿರುವುದು ಶವಾಗಾರ ಸಿಬ್ಬಂದಿ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಓದಿ:ಚಾಮರಾಜನಗರದಲ್ಲೂ ಬ್ಲ್ಯಾಕ್ ಫಂಗಸ್ ಪತ್ತೆ: ಇಬ್ಬರು ಸೋಂಕಿತರು ಮೈಸೂರಿಗೆ ರವಾನೆ

ABOUT THE AUTHOR

...view details