ಶಿವಮೊಗ್ಗ: ಗ್ರಾಮ ಪಂಚಾಯತ ಚುನಾವಣಾ ದ್ವೇಷದಿಂದ ಕೊಲೆ ಮಾಡಿದ ನಾಲ್ವರಿಗೆ ಶಿವಮೊಗ್ಗ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 23 ಸಾವಿರ ರೂ. ದಂಡ ವಿಧಿಸಿದೆ. ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿ ಗ್ರಾಮ ಪಂಚಾಯತಿ 2017ರ ಚುನಾವಣೆ ಸಮಯ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರದಲ್ಲಿ ಮಹೇಶ್ ಹಾಗೂ ಕುಮಾರನಾಯ್ಕ್ ನಡುವೆ ಗಲಾಟೆ ನಡೆದಿತ್ತು. ಇದೇ ದ್ವೇಷದಿಂದ ಮಹೇಶ್ ಹೊಳೆ ಬೆನವಳ್ಳಿಯ ಸಣ್ಣ ತಾಂಡದ ತುಂಗಾ ಕಾಲುವೆ ಮೇಲೆ ಬೈಕ್ನಲ್ಲಿ ಬರುವಾಗ, ಕುಮಾರ ನಾಯ್ಕ್ ಮತ್ತು ತನ್ನ ಸಹಚರರಾದ ಪಿರ್ಯಾನಾಯ್ಕ್, ಚಿನ್ನಾ ನಾಯ್ಕ್ ಹಾಗೂ ಮಧು ಕುಮಾರ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು ಎಂಬ ಆರೋಪದಡಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 143, 302 ಸಹಿತ 149 ಐಪಿಪಿ ಪ್ರಕಾರ ಪ್ರಕರಣ ದಾಖಲಾಗಿತ್ತು.
ಗ್ರಾಮ ಪಂಚಾಯತ ಚುನಾವಣಾ ದ್ವೇಷಕ್ಕೆ ಕೊಲೆ: ನಾಲ್ವರಿಗೆ ಜೀವಾವಧಿ ಶಿಕ್ಷೆ
ಚುನಾವಣೆ ದ್ವೇಷದ ಹಿನ್ನೆಲೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಸಿಪಿಐ ಗಂಗಾಧರ್ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಸಲ್ಲಿಕೆ ಮಾಡಿದ್ದರು. ಪ್ರಕರಣದ ವಾದ ಅಲಿಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ಅವರು ಆರೋಪಿಗಳು ನಡೆಸಿದ ಕೃತ್ಯವನ್ನು ಪರಿಶೀಲಿಸಿ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 23.500 ರೂ ದಂಡವನ್ನು ವಿಧಿಸಿದ್ದಾರೆ. ಒಂದು ವೇಳೆ ದಂಡ ಕಟ್ಟಲು ವಿಫಲರಾದಲ್ಲಿ ಜೀವವಾಧಿ ಶಿಕ್ಷೆಯ ನಂತರ ಹೆಚ್ಚಿನ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ನೀಡಿ ಆದೇಶಿಸಿದ್ದಾರೆ. ಸರ್ಕಾರಿ ವಕೀಲರಾದ ಪುಷ್ಪ ವಾದ ಮಂಡಿಸಿದರು.
ಇದನ್ನೂ ಓದಿ:ಬಲವಂತದಿಂದ ಬಾಲಕಿ ಎಳೆದೊಯ್ದು ಮದುವೆ; ತಾಯಿ ಮಗನಿಗೆ 20 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್