ಶಿವಮೊಗ್ಗ:ಮದುವೆ ಅಂದ್ರೆ ಅಲ್ಲಿ ಮಂತ್ರಘೋಷ, ವಾದ್ಯಮೇಳ ಸೇರಿದಂತೆ ಇನ್ನಿತರ ಸಂಪ್ರದಾಯದ ಮೂಲಕ ಸಪ್ತಪದಿ ತುಳಿಯುತ್ತಾರೆ. ಆದರೆ ಸಾಗರದ ಶರಾವತಿ ಹಿನ್ನೀರಿನ ಪ್ರದೇಶವಾದ ಕರೂರಿನಲ್ಲಿ ಮದುವೆಯೊಂದು ವಿಶಿಷ್ಟವಾಗಿ ನೆರವೇರಿದೆ. ನವಜೀವನಕ್ಕೆ ಕಾಲಿಟ್ಟ ಜೋಡಿ ಭಾರತದ ಸಂವಿಧಾನದ ಪೀಠಿಕೆಯನ್ನು ಪಠಣ ಮಾಡುವ ಮೂಲಕ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಾಗರ ತಾಲೂಕಿನ ಕರೂರು ಗ್ರಾಮದ ಗಣೇಶ ಹಾರಿಗ ಎಂಬುವರು ಅದೇ ಗ್ರಾಮದ ಮೂಕಾಂಬಿಕಾ ಎಂಬುವರನ್ನು ಸಂವಿಧಾನದ ಪೀಠಿಕೆ ಪಠಣ ಮಾಡುವ ಕೈ ಹಿಡಿದಿದ್ದಾರೆ. ಮದುವೆಯು ಕರೂರಿನ ವೆಂಕಟರಮಣ ದೇವಾಲಯದಲ್ಲಿ ಜರುಗಿತು. ಪತ್ರಕರ್ತರಾದ ಗಣೇಶ ಹಾರಿಗ ಕೊಡಚಾದ್ರಿ ತಪ್ಪಲಿನ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಮೂಕಾಂಬಿಕಾರನ್ನು ಮುದುವೆಯಾಗಿದ್ದಾರೆ.