ಶಿವಮೊಗ್ಗ:ಅಡಿಕೆ ಚೇಣಿಗೆ ಸಾಲ ಮಾಡಿಕೊಂಡು ನಷ್ಟ ಉಂಟಾದ ಹಿನ್ನೆಲೆಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಪೊರಲುಕೊಪ್ಪದಲ್ಲಿ ನಡೆದಿದೆ. ತಾಲೂಕಿನ ಸಂತೆಹಕ್ಲು ಸಮೀಪದ ಪೊರಲುಕೊಪ್ಪ ಗ್ರಾಮದ ಮಂಜುನಾಥ್ (46) ಹಾಗೂ ಉಷಾ (42) ನೇಣಿಗೆ ಶರಣಾದ ದಂಪತಿ.
ಮಂಜುನಾಥ್ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ಎರಡು ಎಕರೆ ಜಮೀನು ಹೊಂದಿದ್ದು, ಅಡಿಕೆ ಚೇಣಿ ಮಾಡಲು ಸಾಲ ಮಾಡಿಕೊಂಡಿದ್ದರು. ಆದರೆ ಈ ಬಾರಿ ಫಸಲು ಕಡಿಮೆ ಬಂದು ನಷ್ಟ ಅನುಭವಿಸಿದ್ದರು.