ಶಿವಮೊಗ್ಗ:ಸಾವರ್ಕರ್ ಫ್ಲೆಕ್ಸ್ ವಿವಾದದಿಂದಾಗಿ ನಗರದಲ್ಲಿ ಎರಡು ಕೋಮಿನ ನಡುವೆ ಗಲಾಟೆ ನಡೆದು ಓರ್ವ ಯುವಕನಿಗೆ ಚಾಕು ಇರಿತ ಉಂಟಾಗಿ ನಗರದಲ್ಲಿ 144 ಸೆಕ್ಷನ್ ಜಾರಿ ಸಹ ಮಾಡಲಾಗಿದೆ. ಹಾಗಾಗಿ, ಅನಧಿಕೃತ ಜಾಹಿರಾತು ಫ್ಲೆಕ್ಸ್ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಪಾಲಿಕೆ ಆಯುಕ್ತ ಮಾಯಣ್ಣಗೌಡ, ನಗರದಲ್ಲಿ ಅನಧಿಕೃತ ಜಾಹೀರಾತು, ಫ್ಲೆಕ್ಸ್ಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ. ಯಾವ ಜಾಗದಲ್ಲಿ ಫ್ಲೆಕ್ಸ್ ಅಳವಡಿಸಬೇಕು? ಅದಕ್ಕೆ ಶುಲ್ಕ ಏನಿರುತ್ತೆ? ಎಷ್ಟು ದಿನ ಕಟ್ಟಬೇಕು? ಪೂರ್ವಾನುಮತಿ ಹೇಗೆ ತೆಗೆದುಕೊಳ್ಳಬೇಕು. ಅದರ ಉದ್ದ ಎಷ್ಟಿರಬೇಕು? ಅಗಲ ಎಷ್ಟಿರಬೇಕು?. ಯಾವ ಯಾವ ಸರ್ಕಲ್ಗಳಲ್ಲಿ ಅದರ ನಿರ್ಬಂಧ ಇದೆ. ಇವೆಲ್ಲ ಅಂಶಗಳನ್ನು ಸೇರಿಸಿ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಕರಡು ನಿಯಮ ಎಂಬ ಬೈಲಾವನ್ನು ರೂಪಿಸಿಬೇಕಿತ್ತು. ಅದನ್ನು ಈಗ ಸಿದ್ಧಪಡಿಸಿದ್ದೇವೆ. ಅದು ಸುಮಾರು 45 ಪೇಜ್ ಇದೆ.