ಶಿವಮೊಗ್ಗ:ನಗರದ ಗಾಂಧಿ ಪಾರ್ಕ್ ಅವ್ಯವಸ್ಥೆ ಕುರಿತು ಈಟಿವಿ ಭಾರತ್ ಸುದ್ದಿ ಪ್ರಕಟಿಸಿದ್ದು, ಸುದ್ದಿಯಿಂದ ಎಚ್ಚೆತ್ತುಕೊಂಡ ಉಪ ಮೇಯರ್ ಹಾಗೂ ಪಾಲಿಕೆ ಅಧಿಕಾರಿಗಳು ಉದ್ಯಾನವನಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಈಟಿವಿ ಭಾರತ್ ಇಂಪ್ಯಾಕ್ಟ್... ಗಾಂಧಿ ಪಾರ್ಕ್ಗೆ ಕಾಯಕಲ್ಪದ ಭರವಸೆ! - ಅಧಿಕಾರಿಗಳು
ಮೇ 28 ರಂದು ಮುರುಕುಲು ಆಟಿಕೆ ಸಾಧನಗಳು... ನಿರ್ವಹಣೆಯಿಲ್ಲದೆ ಅವ್ಯವಸ್ಥೆಯ ಆಗರವಾದ ಗಾಂಧಿ ಪಾರ್ಕ್ ಎಂಬ ಶೀರ್ಷಿಕೆ ಅಡಿಯಲ್ಲಿ ಈಟಿವಿ ಭಾರತ್ ಸುದ್ದಿ ಪ್ರಕಟಿಸಿತ್ತು. ಈ ಸುದ್ದಿಯಿಂದ ಎಚ್ಚೆತ್ತ ಅಧಿಕಾರಿಗಳು ಪಾರ್ಕ್ಗೆ ಕಾಯಕಲ್ಪ ನೀಡುವ ಭರವಸೆ ನೀಡಿದ್ದಾರೆ.

ಮೇ 28 ರಂದು ಮುರುಕುಲು ಆಟಿಕೆ ಸಾಧನಗಳು... ನಿರ್ವಹಣೆಯಿಲ್ಲದೆ ಅವ್ಯವಸ್ಥೆಯ ಆಗರವಾದ ಗಾಂಧಿ ಪಾರ್ಕ್ ಎಂಬ ಶೀರ್ಷಿಕೆ ಅಡಿಯಲ್ಲಿ ಈಟಿವಿ ಭಾರತ್ ಸುದ್ದಿ ಪ್ರಕಟಿಸಿತ್ತು. ವರದಿಯಲ್ಲಿ ಮಹಾನಗರ ಪಾಲಿಕೆ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದ ಫಲವಾಗಿ ಉದ್ಯಾನವನ ಈ ದುಸ್ಥಿತಿಗೆ ಬಂದಿರುವುದಾಗಿ ತಿಳಿಸಲಾಗಿತ್ತು.
ಉದ್ಯಾನವನಕ್ಕೆ ಭೇಟಿ ನೀಡಿದ ಉಪ ಮೇಯರ್ ಚನ್ನಬಸಪ್ಪ ಉದ್ಯಾನವನದ ಸಮಸ್ಯೆಯನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರನಿಗೆ ತರಾಟೆಗೆ ತಗೆದುಕೊಂಡರು. ನಂತರ ಈಟಿವಿ ಭಾರತ್ನೊಂದಿಗೆ ಮಾತನಾಡಿ, ಅಧಿಕಾರಿಗಳು ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಉದ್ಯಾನವನದಲ್ಲಿ ಅನೇಕ ಸಮಸ್ಯೆಗಳಾಗಿವೆ. ಎಲ್ಲವನ್ನೂ ಗಮನಿಸಿದ್ದೇವೆ. ಈ ಕುರಿತು ಗುತ್ತಿಗೆದಾರನಿಗೆ ನೊಟೀಸ್ ಜಾರಿ ಮಾಡಿ, ಮೂರು ತಿಂಗಳ ಒಳಗಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು.