ಶಿವಮೊಗ್ಗ:ರಾಜ್ಯದಾದ್ಯಂತ ಕೊರೊನಾ ವೈರಸ್ ಹರಡದಂತೆ ತಡೆಯಲು ಕಟ್ಟೆಚ್ಚರ ವಹಿಸಲಾಗಿದ್ದು, ಸೋಂಕಿತರ ಮೇಲೆ ತೀವ್ರ ನಿಗಾ ಇಡಲಾಗಿದೆ. ಈ ನಡುವೆ ಕೊರೊನಾ ವೈರಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ ಹಿನ್ನೆಲೆ ಶಿಕ್ಷಕ ನಾಗರಾಜ್ ನಾಯ್ಕ್ ಎಂಬಾತನ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.
ಕೊರೊನಾ ಕುರಿತು ಸುಳ್ಳು ಸುದ್ದಿ ಹರಡಿದ ಶಿಕ್ಷಕನ ವಿರುದ್ಧ ಕೇಸ್ - ಶಿವಮೊಗ್ಗ ಕೊರೊನಾ ವೈರಸ್
ಕೊರೊನಾ ವೈರಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ ಹಿನ್ನೆಲೆ ಶಿಕ್ಷಕ ನಾಗರಾಜ್ ನಾಯ್ಕ್ ಎಂಬಾತನ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.
ಕೊರೊನ ವೈರಸ್: ಸುಳ್ಳು ಸುದ್ದಿ ಹರಡಿದ ಶಿಕ್ಷಕನ ವಿರುದ್ಧ ಸ್ವಯಂ ದೂರು
ಶಿವಮೊಗ್ಗ ನಗರದಲ್ಲಿ ಇಬ್ಬರು ಕೊರೊನಾ ಪೀಡಿತರು ತಪ್ಪಿಸಿಕೊಂಡಿದ್ದು, ಇದಿರಂದ ಸಾರ್ವಜನಿಕರು ಆಸ್ಪತ್ರೆಗೆ ಬರಬಾರದು ಎಂಬ ಸಂದೇಶವನ್ನು ವಾಟ್ಸಪ್ ಮೂಲಕ ಹರಿಬಿಡಲಾಗಿತ್ತು. ಸುಳ್ಳು ಸುದ್ದಿ ಹರಡಿದ್ದ ಕಾರಣದಿಂದಾಗಿ ನಾಗರಾಜ್ ವಿರುದ್ಧ ಇಲ್ಲಿನ ಕುಂಸಿ ಪೊಲೀಸ್ ಠಾಣೆಯಲ್ಲಿ ಸ್ವಯಂ ದೂರು ದಾಖಲಾಗಿದ್ದಲ್ಲದೆ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಕೊರೊನಾ ಬಗ್ಗೆ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಿರುವ ಪೊಲೀಸರ ನಿರ್ಧಾರಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.