ಕರ್ನಾಟಕ

karnataka

ಶಿವಮೊಗ್ಗದಲ್ಲಿ ಇಂದು ವೈದ್ಯೆ, 7 ಮಂದಿ ಪೊಲೀಸರು ಸೇರಿ 9 ಜನರಿಗೆ ಕೊರೊನಾ!

By

Published : Jun 1, 2020, 8:05 PM IST

ಶಿವಮೊಗ್ಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 51ಕ್ಕೆ ಏರಿದ್ದು, ಇದರಲ್ಲಿ 25 ಸಕ್ರಿಯ ಪ್ರಕರಣಗಳಿವೆ. 26 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಳೆದ 15 ದಿನಗಳ ಹಿಂದೆ ಕ್ವಾರಂಟೈನ್ ಆಗಿದ್ದ ಎಸ್ಪಿ,‌ ಎಎಸ್ಪಿ ಸೇರಿದಂತೆ ಎಲ್ಲರೂ ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕೊರೊನಾ
ಕೊರೊನಾ

ಶಿವಮೊಗ್ಗ: ಇಂದು ಜಿಲ್ಲೆಯಲ್ಲಿ 9 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. ಬೆಂಗಳೂರಿನ ಪಾದರಾಯನಪುರ ಹಾಗೂ ಶಿವಾಜಿನಗರಕ್ಕೆ ಕರ್ತವ್ಯದ ಮೇಲೆ ಹೋಗಿದ್ದ ಜಿಲ್ಲೆಯ ಕೆಎಸ್​ಆರ್​ಪಿಯ ಏಳು ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ ವೈದ್ಯೆಗೂ ಕೊರೊನಾ ವಕ್ಕರಿಸಿದೆ.

P-3302ರಿಂದ P-3310ರವರೆಗೆ ಇಂದು ಜಿಲ್ಲೆಯಲ್ಲಿ 9 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗ ತಾಲೂಕು ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ (P-3307)ಗೆ (P-1305) ಸಂಪರ್ಕದಿಂದ ಕೊರೊನಾ ಪಾಸಿಟಿವ್ ಬಂದಿದೆ. ಇವರಿಗೆ ಪಾಸಿಟಿವ್ ಬಂದಿದೆ ಎಂದು ತಿಳಿಯುತ್ತಿದ್ದಂತೆಯೇ ವೈದ್ಯೆ ತಾವೇ ಸ್ವತಃ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. P-3308 (52) ವರ್ಷದ ವ್ಯಕ್ತಿಗೆ ಕೊರೊನಾ ಹೇಗೆ ಬಂತು‌ ಎಂಬ ಮಾಹಿತಿ ಲಭ್ಯವಾಗಿಲ್ಲ. ಇವರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ಉಳಿದಂತೆ ಏಳು ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಇರುವುದು ದೃಢವಾಗಿದೆ.

ವೈದ್ಯೆ‌ ಸೇರಿ 9 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 51ಕ್ಕೆ ಏರಿದ್ದು, ಇದರಲ್ಲಿ 25 ಸಕ್ರಿಯ ಪ್ರಕರಣಗಳಿವೆ. 26 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಳೆದ 15 ದಿನಗಳ ಹಿಂದೆ ಕ್ವಾರಂಟೈನ್ ಆಗಿದ್ದ ಎಸ್ಪಿ,‌ ಎಎಸ್ಪಿ ಸೇರಿದಂತೆ ಎಲ್ಲರೂ ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಎರಡು ಪೊಲೀಸ್ ಠಾಣೆ ಸೀಲ್ ಡೌನ್:

ಶಿವಮೊಗ್ಗದ ಜಯನಗರ ಹಾಗೂ ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಗಳನ್ನು ಸ್ಯಾನಿಟೈಸ್​ ಮಾಡಿ ಸೀಲ್ ಡೌನ್ ಮಾಡಲಾಗಿದೆ.

ABOUT THE AUTHOR

...view details