ಶಿವಮೊಗ್ಗ:ರಾಜ್ಯದಲ್ಲೂ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಕುವೆಂಪು ವಿಶ್ವವಿದ್ಯಾಲದಯದಲ್ಲಿ ಮಾರ್ಚ್ 28 ರಂದು ನಡೆಯಬೇಕಿದ್ದ ಘಟಿಕೋತ್ಸವ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆ ಮೂಲಕ ತಿಳಿಸಿದೆ.
ಘಟಿಕೋತ್ಸವಕ್ಕೂ ತಟ್ಟಿದ ಕೊರೊನಾ ಕಾಟ..ಅನಿರ್ಧಿಷ್ಟಾವಧಿ ಮುಂದೂಡಿಕೆ - Latest Kuvempu VV News
ಕೊರೊನಾ ವೈರಸ್ ಹಿನ್ನೆಲೆ ಮಾರ್ಚ್ 28 ರಂದು ನಡೆಯಬೇಕಿದ್ದ ಕುವೆಂಪು ವಿವಿಯ 30 ನೇ ಘಟಿಕೋತ್ಸ ಕಾರ್ಯಕ್ರಮವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಿ ಕುಲಪತಿ ಆದೇಶ ಹೊರಡಿಸಿದ್ದಾರೆ.
ಘಟಿಕೋತ್ಸವಕ್ಕೂ ತಟ್ಟಿದ ಕೊರೊನಾ ಕಾಟ
ಮುಂಜಾಗ್ರತಾ ಕ್ರಮವಾಗಿ ನಡೆಯಬೇಕಿದ್ದ 30ನೇ ಘಟಿಕೋತ್ಸವವನ್ನು ಹಣಕಾಸು ಆಯೋಗ ಮತ್ತು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಮುಂದೂಡಲಾಗಿದೆ.
ಕುವೆಂಪು ವಿವಿಯಲ್ಲಿ ನಡೆಯಬೇಕಿದ್ದ ವಿಚಾರ ಸಂಕಿರಣ, ಸಮಾವೇಶಗಳನ್ನು ಕೂಡ ಅನಿರ್ದಿಷ್ಠಾವಧಿಗೆ ಮುಂದೂಡಲಾಗಿದೆ ಎಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.