ಕರ್ನಾಟಕ

karnataka

ETV Bharat / state

ಸಿಬ್ಬಂದಿಗೆ ಕೊರೊನಾ: ಶಿವಮೊಗ್ಗ ಡಿಸಿ ಕಚೇರಿ‌ ಸೀಲ್ ಡೌನ್ - Shimoga DC Office Seal Down News

ಡಿಸಿ ಕಚೇರಿಯ ಮಹಿಳಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ನಿನ್ನೆ ಸಂಜೆಯಿಂದಲೇ ಕಚೇರಿಯನ್ನು‌ ಸೀಲ್ ಡೌನ್ ಮಾಡಲಾಗಿದೆ.

ಡಿಸಿ ಕಚೇರಿ‌ ಸೀಲ್ ಡೌನ್
ಡಿಸಿ ಕಚೇರಿ‌ ಸೀಲ್ ಡೌನ್

By

Published : Aug 21, 2020, 1:17 PM IST

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯೊಬ್ಬರಿಗೆ ನಿನ್ನೆ ಬೆಳಗ್ಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಡಿಸಿ ಕಚೇರಿಯ ಮಹಿಳಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ನಿನ್ನೆ ಸಂಜೆಯಿಂದಲೇ ಕಚೇರಿಯನ್ನು‌ ಸೀಲ್ ಡೌನ್ ಮಾಡಲಾಗಿದೆ.

ಡಿಸಿ ಕಚೇರಿ‌ ಸೀಲ್ ಡೌನ್

ನಿನ್ನೆ ಸಂಜೆಯೇ ಡಿಸಿ ಕಚೇರಿಯನ್ನು ಸ್ಯಾನಿಟೈಸ್​​ ಮಾಡಲಾಗಿದೆ. ಇಂದು ಸಹ ಸ್ಯಾನಿಟೈಸ್​ ಮಾಡಲು ಡಿಸಿ ಸೂಚನೆ ನೀಡಿದ್ದಾರೆ. ಡಿಸಿ ಕಚೇರಿ ಇಂದು ಪೂರ್ಣವಾಗಿ‌ ಸೀಲ್ ಡೌನ್ ಆಗಿರಲಿದೆ.

ನಾಳೆ ಗಣೇಶ ಹಬ್ಬದ ರಜೆ, ನಾಡಿದ್ದು ಭಾನುವಾರ ಸಹ ರಜೆ ಇರುವುದರಿಂದ ಸೋಮವಾರ ಡಿಸಿ ಕಚೇರಿ ಸಾರ್ವಜನಿಕರಿಗೆ ತೆರೆಯಲಿದೆ. ನಿನ್ನೆ ಸಹ ಡಿಸಿ‌ ಕಚೇರಿಯ ಸಿಬ್ಬಂದಿಗೆ ರ್‍ಯಾಪಿಡ್ ಆ್ಯಂಟಿಜೆನ್ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು.

ABOUT THE AUTHOR

...view details