ಶಿವಮೊಗ್ಗ: ಸಿಎಂ ತವರು ಜಿಲ್ಲೆಯಲ್ಲಿಂದು ನಾಲ್ಕು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 123ಕ್ಕೆ ಏರಿಕೆಯಾಗಿದೆ.
ಸಿಎಂ ತವರು ಜಿಲ್ಲೆಯಲ್ಲಿ ಕೆಎಸ್ಆರ್ಪಿಯ ನಾಲ್ವರಿಗೆ ಕೊರೊನಾ
ಶಿವಮೊಗ್ಗ ಜಿಲ್ಲೆಯಲ್ಲಿಂದು ನಾಲ್ಕು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 123ಕ್ಕೆ ಏರಿಕೆಯಾಗಿದೆ.
ರೋಗಿ-10395 29 ವರ್ಷದ ಪುರುಷ, ರೋಗಿ-10396 ಪುರುಷ, ರೋಗಿ-10397 25 ವರ್ಷದ ಪುರುಷ ಹಾಗೂ ರೋಗಿ-10398 25 ಪುರುಷ ಇವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲಾ ಕೆ.ಎಸ್.ಆರ್.ಪಿಯ ಸಿಬ್ಬಂದಿಗಳಾಗಿದ್ದು, ಬೆಂಗಳೂರಿಗೆ ಕರ್ತವ್ಯಕ್ಕೆಂದು ಹೋಗಿ ಬಂದಿದ್ದರು. ಇವರನ್ನು ಮೊದಲೇ ಕ್ವಾರಂಟೈನ್ ಮಾಡಿದ ಕಾರಣ ಹೆಚ್ಚಿನ ಆಂತಕ ಸೃಷ್ಟಿಯಾಗಿಲ್ಲ.
ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 123ಕ್ಕೆ ಏರಿಕೆಯಾಗಿದೆ. ಇಂದು 5 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು 93 ಜನ ಬಿಡುಗಡೆಯಾದಂತೆ ಆಗಿದೆ. ಸದ್ಯ ಆಸ್ಪತ್ರೆಯಲ್ಲಿ 29 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು11 ಕಂಟೇನ್ಮೆಂಟ್ ಪ್ರದೇಶಗಳು ಇವೆ.