ಕರ್ನಾಟಕ

karnataka

ETV Bharat / state

ಶಿವಮೊಗ್ಗ: 11 ತಿಂಗಳ ಮಗು ಸೇರಿ 33 ಜನರಲ್ಲಿ ಕೊರೊನಾ ಸೋಂಕು ಪತ್ತೆ! - Corona Positive found in 33 people

ಶಿವಮೊಗ್ಗ ನಗರದಲ್ಲಿ 11 ತಿಂಗಳ ಮಗು ಸೇರಿ 33 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟಾರೆ 318 ಪ್ರಕರಣಗಳು ದಾಖಲಾಗಿವೆ.

Corona Positive
33 ಜನರಲ್ಲಿ ಕೊರೊನಾ ಪಾಸಿಟಿವ್

By

Published : Jul 7, 2020, 10:35 PM IST

ಶಿವಮೊಗ್ಗ:ನಗರದಲ್ಲಿ ಇಂದು 33 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 318ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 12 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 137 ಜನ ಕೊರೊನಾದಿಂದ ಮುಕ್ತರಾಗಿ ಮನೆಗೆ ವಾಪಸ್ ಆಗಿದ್ದಾರೆ. ಆಸ್ಪತ್ರೆಯಲ್ಲಿ 177 ಸೋಂಕಿತರು ಸಕ್ರಿಯರಾಗಿ ಚಿಕಿತ್ಸೆಪಡೆಯುತ್ತಿದ್ದಾರೆ. ಇದುವರೆಗೂ ಕೊರೊನಾಗೆ 4 ಜನ ಬಲಿಯಾಗಿದ್ದಾರೆ.

ಇಂದು ಪತ್ತೆಯಾದ 33 ಪ್ರಕರಣಗಳಲ್ಲಿ 4 ಜನ ಅಂತರ್​​ ಜಿಲ್ಲೆ ಪ್ರಯಾಣಿಕರಿದ್ದಾರೆ. ಓರ್ವ ದಕ್ಷಿಣ ಆಫ್ರಿಕಾದಿಂದ ಬಂದಿದ್ದಾರೆ. ಐಎಲ್​ಐಯಿಂದ 3 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದಿನದ ಸೋಂಕಿತರ ಪೈಕಿ ನಾಲ್ವರ ಸಂಪರ್ಕ ಪತ್ತೆಯಾಗಿಲ್ಲ. 20 ಜನಕ್ಕೆ ದ್ವಿತೀಯ ಸಂಪರ್ಕದಿಂದ ಕೊರೊನಾ ಬಂದಿದ್ದು, ಇದರಲ್ಲಿ 11 ತಿಂಗಳ ಹೆಣ್ಣು ಮಗು ಕೂಡ ಸೇರಿದೆ.

ABOUT THE AUTHOR

...view details