ಶಿವಮೊಗ್ಗ: ಇಲ್ಲಿನ ಕೇಂದ್ರ ಕಾರಾಗೃಹದ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ಧೃಡವಾಗಿದೆ.
ಶಿವಮೊಗ್ಗದ ಕೇಂದ್ರ ಕಾರಾಗೃಹ ಸಿಬ್ಬಂದಿಗೆ ಕೊರೊನಾ: ಜೈಲಿಗಿಲ್ಲ ಅಪಾಯ - Corona Positive for Shimoga Central Prison Guard
ಶಿವಮೊಗ್ಗ ಕೇಂದ್ರ ಕಾರಾಗೃಹದ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಧೃಡಪಟ್ಟಿದೆ. ಆದರೆ, ಇವರು ಜೈಲಿನ ಹೊರಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಕಾರಣ ಜೈಲಿಗೆ ಯಾವುದೇ ಅಪಾಯವಿಲ್ಲ ಎಂದು ಕೇಂದ್ರ ಕಾರಾಗೃಹದ ಚೀಫ್ ಸೂಪರಿಂಟೆಂಡೆಂಟ್ ಡಾ.ರಂಗನಾಥ್ ತಿಳಿಸಿದ್ದಾರೆ.
ಇವರು ಜೈಲಿನ ಹೊರ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸಾಗರದ ನಿವಾಸಿಯಾಗಿರುವ ಇವರಿಗೆ ತಮ್ಮೂರಿಗೆ ಹೋದಾಗ ಅಲ್ಲಿನ ಮೆಡಿಕಲ್ ಶಾಪ್ ವ್ಯಕ್ತಿಯೊಬ್ಬರ ಸಂಪರ್ಕದಿಂದ ಕೊರೊನಾ ಸೋಂಕು ತಗಲಿದೆ ಎನ್ನಲಾಗಿದೆ. ಸಾಗರದಿಂದ ಬಂದವರಿಗೆ ಕ್ವಾರಂಟೈನ್ನಲ್ಲಿರುವಂತೆ ಜೈಲಿನಿಂದ ಸೂಚಿಸಲಾಗಿತ್ತು. ಸಾಗರದ ವ್ಯಕ್ತಿಗೆ ಸೋಂಕು ತಗಲಿದೆ ನಂತರ ಇವರು ಸಹ ಸ್ವ್ಯಾಬ್ ಪರೀಕ್ಷೆ ನಡೆಸಿದ ಬಳಿಕ ಸೊಂಕು ಇರುವುದು ಧೃಡಪಟ್ಟಿದೆ. ಹಾಗಾಗಿ ಇವರನ್ನು ಮೆಗ್ಗಾನ್ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಜೈಲಿನ ಹೊರಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಕಾರಣ ಜೈಲಿಗೆ ಯಾವುದೇ ಅಪಾಯವಿಲ್ಲ ಎಂದು ಕೇಂದ್ರ ಕಾರಾಗೃಹದ ಚೀಫ್ ಸೂಪರಿಂಟೆಂಡೆಂಟ್ ಡಾ.ರಂಗನಾಥ್ ತಿಳಿಸಿದ್ದಾರೆ.