ಶಿವಮೊಗ್ಗ:ನಾಡ ಕಚೇರಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಕೋಣಂದೂರಿನ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಕೋಣಂದೂರಿನ ನಾಡ ಕಚೇರಿ ಸಿಬ್ಬಂದಿಗೆ ಕೊರೊನಾ: ತೀರ್ಥಹಳ್ಳಿ ತಾಲೂಕು ಕಚೇರಿ ಸೀಲ್ ಡೌನ್ - Shimoga latest news
ಕೋಣಂದೂರಿನ ನಾಡ ಕಚೇರಿ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಹಿನ್ನೆಲೆಯಲ್ಲಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

Shimoga
ಸೋಂಕಿತ ವ್ಯಕ್ತಿ ತೀರ್ಥಹಳ್ಳಿ ತಾಲೂಕು ಕಚೇರಿ ಹಾಗೂ ಮಂಡಗದ್ದೆಯ ನಾಡ ಕಚೇರಿಗೂ ಹೋಗಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಚೇರಿಗಳನ್ನು ಸೀಲ್ ಡೌನ್ ಮಾಡಲಾಗಿದೆ.
ತೀರ್ಥಹಳ್ಳಿ ತಾಲೂಕು ಕಚೇರಿ ಸೇರಿದಂತೆ ಅಕ್ಕ ಪಕ್ಕದ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ತಾಲೂಕು ಕಚೇರಿ ಹಾಗೂ ಎರಡು ನಾಡ ಕಚೇರಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಮೂರು ಕಚೇರಿಗಳನ್ನು ಸೋಮವಾರದವರೆಗೂ ಬಂದ್ ಮಾಡುವ ನಿರ್ಧಾರಕ್ಕೆ ತಾಲೂಕು ಆಡಳಿತ ಬಂದಿದೆ. ತೀರ್ಥಹಳ್ಳಿಯಲ್ಲೇ ಹತ್ತಕ್ಕೂ ಅಧಿಕ ಕಡೆ ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ.