ಶಿವಮೊಗ್ಗ: ಜಿಲ್ಲೆಯಲ್ಲಿ ನಿನ್ನೆ ಮತ್ತೆ 60 ಜನ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 762ಕ್ಕೇರಿದೆ.
ಶಿವಮೊಗ್ಗದಲ್ಲಿ ಮತ್ತೆ 60 ಮಂದಿಗೆ ಕೊರೊನಾ: 37 ಸೋಂಕಿತರು ಗುಣಮುಖ - Shimoga Corona Update
ಶಿವಮೊಗ್ಗದಲ್ಲಿಂದು ನಿನ್ನೆ 60 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅದರಲ್ಲಿ ಶಿವಮೊಗ್ಗ-20, ಭದ್ರಾವತಿ-05, ಸಾಗರ-07, ಶಿಕಾರಿಪುರ-18, ಹೊಸನಗರ-02, ತೀರ್ಥಹಳ್ಳಿ-06, ಸೊರಬ-01 ಹಾಗೂ ಅಂತರ್ ಜಿಲ್ಲೆ ಚಿತ್ರದುರ್ಗದಿಂದ ಬಂದ ಓರ್ವರು ಸೇರಿದ್ದಾರೆ.
ನಿನ್ನೆ ಆಸ್ಪತ್ರೆಯಿಂದ 37 ಜನ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 317 ಜನರು ಗುಣಮುಖರಾಗಿ ಬಿಡುಗಡೆಯಾದಂತಾಗಿದೆ. ಒಟ್ಟು 14 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ನಿನ್ನೆ ಸೋಂಕು ಪತ್ತೆಯಾದ 60 ಜನರಲ್ಲಿ ಶಿವಮೊಗ್ಗ-20, ಭದ್ರಾವತಿ-05, ಸಾಗರ-07, ಶಿಕಾರಿಪುರ-18, ಹೊಸನಗರ-02, ತೀರ್ಥಹಳ್ಳಿ-06, ಸೊರಬ-01 ಹಾಗೂ ಅಂತರ್ ಜಿಲ್ಲೆ ಚಿತ್ರದುರ್ಗದಿಂದ ಬಂದ ಓರ್ವರು ಸೇರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 236 ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ 432 ಮಂದಿಗೆ ಚಿಕಿತ್ಸೆ ಮುಂದುವರೆದಿದೆ. ಈ ಪೈಕಿ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 177 ಜನರು, ಕೋವಿಡ್ ಕೇರ್ ಸೆಂಟರ್ನಲ್ಲಿ 236 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 19 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರತಿನಿತ್ಯ, ಸ್ವ್ಯಾಬ್ ಸಂಗ್ರಹ ಮುಂದುವರೆದಿದ್ದು, ನಿನ್ನೆ ಜಿಲ್ಲೆಯಲ್ಲಿ 333 ಜನರ ಸ್ವ್ಯಾಬ್ ಸಂಗ್ರಹ ಮಾಡಲಾಗಿದೆ. ಇದುವರೆಗೊ ಜಿಲ್ಲೆಯಲ್ಲಿ 22,934 ಜನರ ಸ್ವ್ಯಾಬ್ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 21,384 ಜನರ ಫಲಿತಾಂಶ ಬಂದಿದ್ದು, ಇನ್ನೂ 782 ಜನರ ಫಲಿತಾಂಶ ಬರಬೇಕಿದೆ.