ಕರ್ನಾಟಕ

karnataka

ETV Bharat / state

ಸಿಎಂ ತವರು ಕ್ಷೇತ್ರದಲ್ಲಿ‌ ಏರುತ್ತಲೇ ಇದೆ ಸೋಂಕಿತರ ಸಂಖ್ಯೆ: ಒಂದೇ ದಿನ 74 ಪ್ರಕರಣ - Shimoga Corona is rising News

ಜಿಲ್ಲೆಯಲ್ಲಿ ಇಂದು ಪತ್ತೆಯಾದ ಪ್ರಕರಣದಲ್ಲಿ ದ್ವಿತೀಯ ಸಂಪರ್ಕದಿಂದ 34 ಜನರಿಗೆ, ಸಂಪರ್ಕವೇ ಇಲ್ಲದೆ 10 ಜನಕ್ಕೆ, ಅಂತರ ಜಿಲ್ಲಾ ಪ್ರಯಾಣದಿಂದ 2 ಜನಕ್ಕೆ, ಐಎಲ್​​ಐ ನಿಂದ 28 ಜನಕ್ಕೆ ಕೊರೊನಾ‌ ಪಾಸಿಟಿವ್ ಕಂಡು ಬಂದಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚುತ್ತಲಿದೆ ಕೊರೊನಾ
ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚುತ್ತಲಿದೆ ಕೊರೊನಾ

By

Published : Jul 14, 2020, 11:21 AM IST

ಶಿವಮೊಗ್ಗ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೆ ಇದೆ. ಇದು ಜಿಲ್ಲಾಡಳಿತ ಹಾಗೂ ನಾಗರಿಕರಲ್ಲಿ ಆಂತಕವನ್ನುಂಟು ಮಾಡಿದೆ.

ಜಿಲ್ಲೆಯಲ್ಲಿ ಇಂದು ಒಂದೇ ದಿನ 74 ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆಯಾಗಿದೆ. ಇಂದು‌ ಆಸ್ಪತ್ರೆಯಿಂದ ಯಾರೂ ಸಹ ಬಿಡುಗಡೆಯಾಗಿಲ್ಲ.‌ ಇದುವರೆಗೂ 197 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 313 ಜನ ಮೆಗ್ಗಾನ್ ಕೋವಿಡ್ ಆಸ್ಪತ್ರೆ ಹಾಗೂ ಗಾಜನೂರಿನ ಮೂರಾರ್ಜಿ ಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೊ 10 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚುತ್ತಲಿದೆ ಕೊರೊನಾ

ಜಿಲ್ಲೆಯಲ್ಲಿ ಇಂದು ಪತ್ತೆಯಾದ ಪ್ರಕರಣದಲ್ಲಿ ದ್ವಿತೀಯ ಸಂಪರ್ಕ ದಿಂದ 34 ಜನರಿಗೆ, ಸಂಪರ್ಕವೇ ಇಲ್ಲದೆ 10 ಜನಕ್ಕೆ, ಅಂತರ ಜಿಲ್ಲೆ ಪ್ರಯಾಣದಿಂದ 2 ಜನಕ್ಕೆ, ಐಎಲ್​​ಐ ನಿಂದ 28 ಜನಕ್ಕೆ ಕೊರೊನಾ‌ ಪಾಸಿಟಿವ್ ಕಂಡು ಬಂದಿದೆ. ಜಿಲ್ಲೆಯಲ್ಲಿ 8 ಜನ ಖಾಸಗಿ‌ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಜನ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ 124 ಕಂಟೇನ್ಮೆಂಟ್ ಝೋನ್ ರಚನೆಯಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಡಳಿತ 353 ಜನರ ಸ್ವ್ಯಾಬ್ ಪರೀಕ್ಷೆಗೆ ತೆಗೆದುಕೊಂಡಿದೆ. ಇದುವರೆಗೂ 21,298 ಜನರಿಗೆ ಸ್ವ್ಯಾಬ್ ಪರೀಕ್ಷೆಗೆ ತೆಗೆಯಲಾಗಿದೆ. ಅದರಲ್ಲಿ 19,931 ಜನರ ಫಲಿತಾಂಶ ಬಂದಿದೆ. ಇನ್ನೂ 568 ಜನರ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಸಂಜೆ 6ರ ನಂತರ ಲಾಕ್​​ಡೌನ್ ಮಾಡಲಾಗುತ್ತಿತ್ತು. ಕೆಲ ವ್ಯಾಪಾರಿಗಳು ಮಧ್ಯಾಹ್ನ 3ಕ್ಕೆ ತಮ್ಮ ವ್ಯಾಪಾರ ಬಂದ್ ಮಾಡುತ್ತಿದ್ದಾರೆ.

ABOUT THE AUTHOR

...view details