ಕರ್ನಾಟಕ

karnataka

ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಹೇಗಿದೆ: ಇಲ್ಲಿದೆ ಮಾಹಿತಿ - ಕೊರೊನಾ

ಶಿವಮೊಗ್ಗದಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದ್ದು, ನಿನ್ನೆ ಒಂದೇ ದಿನ 24 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇನ್ನು ಜಿಲ್ಲೆಯ ಪರಿಸ್ಥಿತಿ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಕೊರೊನಾ ಅಬ್ಬರ
ಶಿವಮೊಗ್ಗದಲ್ಲಿ ಶಿವಮೊಗ್ಗದಲ್ಲಿ ಕೊರೊನಾ ಅಬ್ಬರಕೊರೊನಾ ಅಬ್ಬರ

By

Published : Jul 7, 2020, 1:49 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 24 ಕೊರೊನಾ‌ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಇಲ್ಲಿಯವರೆಗೆ 285 ಪ್ರಕರಣಗಳು ಪತ್ತೆಯಾಗಿವೆ. ಇನ್ನು 8 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇಲ್ಲಿವರೆಗೆ ಒಟ್ಟು 125 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ.

156 ಜನ ಮೆಗ್ಗಾನ್ ಹಾಗೂ ಮೊರಾರ್ಜಿ ವಸತಿ ಶಾಲೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 4 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಆದರೆ ನಿನ್ನೆ ಸಂಭವಿಸಿದ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಇನ್ನೂ ಮಾಹಿತಿ ನೀಡಿಲ್ಲ. ಜಿಲ್ಲೆಯಲ್ಲಿ ಇದುವರೆಗೆ 59 ಕಂಟೈನ್ಮೆಂಟ್ ಝೋನ್​ಗಳನ್ನು ಮಾಡಲಾಗಿದೆ.

ಶಿವಮೊಗ್ಗದಲ್ಲಿ ಕೊರೊನಾ ಅಬ್ಬರದ ಕುರಿತು ಮಾಹಿತಿ

ಸೋಮವಾರ ಪತ್ತೆಯಾದ 24 ಪ್ರಕರಣಗಳಲ್ಲಿ 15 ಪ್ರಕರಣಗಳು ದ್ವಿತೀಯ ಸಂಪರ್ಕದಿಂದ ಬಂದಿವೆ. 7 ಜನ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಆರೋಗ್ಯಾಧಿಕಾರಿಗಳು 600 ಜನರ ಸ್ವಾಬ್ ಸಂಗ್ರಹ ಮಾಡಿದ್ದಾರೆ. ಇಲ್ಲಿಯವರೆಗೆ ಜಿಲ್ಲಾಡಳಿತ 18,119 ಜನರ ಸ್ವಾಬ್ ಸಂಗ್ರಹ ಮಾಡಿದೆ. ಇದರಲ್ಲಿ‌ 16,795 ಜನರ ರಕ್ತ ಮಾದರಿ ಫಲಿತಾಂಶ ಬಂದಿದೆ. ಇನ್ನೂ 1,035 ಜನರ ಫಲಿತಾಂಶ ಬರಬೇಕಿದೆ. 175 ಜನ ದೇಶ-ವಿದೇಶಗಳಿಂದ ಬಂದಿದ್ದಾರೆ. 238 ಜನರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ.

ABOUT THE AUTHOR

...view details